ದೊಡ್ಡಬಳ್ಳಾಪುರ : ವಿಕೇಂಡ್ ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ನಂದಿ ಗಿರಿಧಾಮದ ಕಡೆಗೆ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸುಮಾರು ಎರಡು ಕಿ.ಮೀ.ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.
ಮುಂಜಾನೆ 5 ರಿಂದಲೇ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರ ದಂಡು ಗಿರಿಧಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಬಿದ್ದ ಪ್ರವಾಸಿಗರ ಮೂಡ್ ಔಟ ಆಗಿತ್ತು.
ಇನ್ನು ಪ್ರವಾಸಿಗರ ವಾಹನ ದಟ್ಟಣೆಯಿಂದಾಗಿ ಸ್ಥಳೀಯರ ಓಡಾಟಕ್ಕೂ ತೀವ್ರ ತೊಂದರೆಯಾಗಿದೆ. ಟಿಕೆಟ್ ನೀಡುವ ಸ್ಥಳದಿಂದ ಬೆಟ್ಟದ ಕ್ರಾಸ್, ಕಾರಹಳ್ಳಿ ಕ್ರಾಸ್ ಹಾಗೂ ಹೆಗ್ಗಡಿಹಳ್ಳಿವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ.
PublicNext
12/06/2022 01:37 pm