ಬೆಂಗಳೂರು: ಒಂದು ಕಡೆ ಜನರು ಪೆಟ್ರೋಲ್-ಡೀಸೆಲ್ ದರ ಇಳಿಕೆ ಆಗಿರುವುದರಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈಗ ಪೆಟ್ರೋಲ್ ಬಂಕ್ ಮಾಲೀಕರು ಸರಕಾರದ ವಿರುದ್ಧ ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಪೆಟ್ರೋಲ್ ಬಂಕ್ ಮಾಲೀಕರು ಸರ್ಕಾರಕ್ಕೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಕೇಂದ್ರ ಸರಕಾರವು ಏಕಾಏಕಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಮುಂಚಿತವಾಗಿ ಆಯಿಲ್ ಕಂಪನಿಗಳಿಗೆ ಮುಂಚಿತವಾಗಿ ಕಾಸ್ ಕಟ್ಟಲಾಗಿತ್ತು. ಮತ್ತು ರಾಜ್ಯ ಸರ್ಕಾರವು ಸೇಲ್ ಟ್ಯಾಕ್ಸ್ ನಲ್ಲಿ ಇಳಿಕೆ ಮಾಡಿದರೆ ಇದು ಪೆಟ್ರೋಲ್ ಬಂಕ್ ಮಾಲೀಕರಿಗೆ ಇನ್ನಷ್ಟು ಸಂಕಟವನ್ನು ತಂದಿಡುತ್ತದೆ.
ಕೇಂದ್ರ ಸರ್ಕಾರವು ಧಿಡೀರ್ ಎಂದು ಪೆಟ್ರೋಲ್ ಡೀಸೆಲ್ ಬೆಲೆಯನ್ನು ಇಳಿಸಿರುವ ಕಾರಣ. ಇದು ನಮಗೆ ಪ್ರತಿ ಲೀಟರ್‌ನಲ್ಲಿ ಹತ್ತು ರೂಪಾಯಿ ನಷ್ಟ ತಂದಿಟ್ಟಿವೆ ಎಂದು ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಅಧ್ಯಕ್ಷ ಕೆಎಂ ಬಸವೇಗೌಡ ಪಬ್ಲಿಕ್ ನೆಕ್ಸ್ಟ್‌ಗೆ ತಿಳಿಸಿದರು.
ಪೆಟ್ರೋಲ್ ಬಂಕ್ ಮಾಲೀಕರು ಈಗಾಗಲೇ ಸರಕಾರಕ್ಕೆ ಮನವಿ ಕೂಡ ಮಾಡಿದರು ಆದರೆ ಸರಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದ ಕಾರಣ ಪೆಟ್ರೋಲ್ ಬಂಕ್ ಗಳನ್ನು ಮುಚ್ಚಿ ಸ್ಟ್ರೈಕ್ ಮಾಡುವುದು ಒಂದೇ ದಾರಿ ಎಂದು ಪರಿಗಣಿಸಿದ್ದಾರೆ. ಪ್ರತಿ 50 ಕಿಲೋ ಲೀಟರ್ ಪೆಟ್ರೋಲ್ ನಾ ಖರೀದಿ ಮಾಡಿದಾಗ ಪೆಟ್ರೋಲ್ ಬಂಕ್ ಮಾಲೀಕರಿಗೆ 5 ಲಕ್ಷಗಳು ನಷ್ಟ ಉಂಟಾಗುತ್ತಿದೆ.
ಇದರ ಮಧ್ಯೆ ಸಿಎಂ ಬಸವರಾಜ್ ಬೊಮ್ಮಾಯಿ ಮಹಾರಾಷ್ಟ್ರ ರಾಜಸ್ಥಾನ ಮತ್ತು ಕೇರಳದಲ್ಲಿ ತಮ್ಮ ರಾಜ್ಯದ ಸೇಲ್ಸ್ ಟ್ಯಾಕ್ಸ್‌ಅನ್ನು ಇಳಿಸಿರುವದಿಂದ ನಮ್ಮ ರಾಜ್ಯದಲ್ಲೂ ಕೂಡ ಇಳಿಸುವ ಸಂಕಷ್ಟದಲ್ಲಿ ಸಿಲುಕಿದ್ದಾರೆ.ಈಗಾಗಲೇ ರಾಜ್ಯದ ಪೆಟ್ರೋಲ್ ತೆರಿಗೆ ನಲ್ಲಿ 1.9 ಪೈಸೆ ಪೆಟ್ರೋಲ್‌ಗೆ ಮತ್ತು ಒಂದು ರೂಪಾಯಿ ಪರ್ ಲಿಟರ್ ಡೀಸಲ್ ನಲ್ಲಿ ನಷ್ಟವನ್ನು ಅನುಭವಿಸುತ್ತಿರುವ ರಾಜ್ಯ ಸರ್ಕಾರ.ಇದರಿಂದ ರಾಜ್ಯದ ಮುಂದಿನ ನಡುಗೆ ಹೇಗಿರುತ್ತೆ ಅಂತ ನೋಡಬೇಕು.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
PublicNext
26/05/2022 09:10 pm