ಬೆಂಗಳೂರು: ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದಿಂದ ಗುತ್ತಿಗೆ ಪಡೆದಿರುವ 90 ವಿದ್ಯುತ್ ಬಸ್‌ಗಳು ಸಂಪೂರ್ಣವಾಗಿ ರಸ್ತೆಗೆ ಇಳಿಯುವ ಮುನ್ನವೇ ಅಶೋಕ ಲೇ ಲ್ಯಾಂಡ್ ಕಂಪನಿಯಿಂದ 300 ವಿದ್ಯುತ್ ಬಸ್ ಪಡೆಯಲು ಬಿಎಂಟಿಸಿ ಮುಂದಾಗಿದೆ.
ಅಶೋಕ್ ಲೇಲ್ಯಾಂಡ್ ಕಂಪನಿ ಒದಗಿಸುತ್ತಿರುವ ಎಲ್ಲಾ ಬಸ್‌ಗಳಿಗೂ ಚಾಲಕರನ್ನು ಕಂಪನಿಯೇ ನೀಡಲಿದೆ. ನಿರ್ವಾಹಕರನ್ನು ಮಾತ್ರ ಬಿಎಂಟಿಸಿ ನಿಯೋಜಿಸಲಿದೆ. ಈ ಬಸ್‌ಗಳು ಪ್ರತಿ ದಿನ 225 ಕಿ.ಮೀ ನಷ್ಟು ಸಂಚಾರ ಮಾಡಲಿದೆ. ಈ ಸಂಬಂಧ ಕಿ.ಮೀ.ಗೆ 48 ರೂ ನೀಡು ವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಯಲಹಂಕ, ಬಿಡದಿ , ಅತ್ತಿಬೆಲೆ ಸೇರಿದಂತೆ ನಗರದ ಹೊರವಲಯದಲ್ಲಿ ಲೇಲ್ಯಾಂಡ್ ಬಸ್ ಸಂಚಾರ ಮಾಡಲಿದೆ.
Kshetra Samachara
25/05/2022 01:52 pm