ಬೆಂಗಳೂರು: ಮೊನ್ನೆ ಸಂಜೆ ಸುರಿದ ಭಾರಿ ಮಳೆಗೆ ಬೆಂಗಳೂರಿನ ಜನ ತತ್ತರಿಸಿ ಹೋಗಿದ್ದಾರೆ. ಇನ್ನೊಂದೆಡೆ ಮನೆಗಳಿಗೆ ನೀರು ನುಗ್ಗಿ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಹಲವಾರು ಮನೆಗಳಿಗೆ ಮಳೆ ನೀರು ನುಗ್ಗಿದೆ. ಈ ಲೇಔಟ್‌ನಲ್ಲಿ ಕೂಡ ಹಲವಾರು ಮನೆಗಳಿಗೆ ನೀರು ನುಗ್ಗಿದೆ ನೀರು ನುಗ್ಗಿದ ಮನೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಆ ಪರಿಶೀಲನೆ ಬರೀ ದೊಡ್ಡ ದೊಡ್ಡ ಮನೆಗಳಿಗೆ ಮಾತ್ರ ಸೀಮಿತಗೊಂಡಿತ್ತು.
ಇದು ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್‌ನ ದೃಶ್ಯ. ಈ ವೃದ್ಧೆ ಮನೆಗೆ ಕೂಡ ನೀರು ನುಗ್ಗಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳಾಗಲಿ ಅಥವಾ ಅಗ್ನಿಶಾಮಕದಳ ಭೇಟಿ ನೀಡಿ ನೀರನ್ನು ಹೊರ ಹಾಕಲು ಮುಂದಾಗಿಲ್ಲ. ವೃದ್ಧೆಯ ಮನೆ ಸಂಪೂರ್ಣವಾಗಿ ನೀರಿನಿಂದ ತುಂಬಿ ಹೋಗಿದ್ದು, ತಾನೇ ತನ್ನ ಕೈಯಾರೆ ನೀರನ್ನು ಹೊರ ಹಾಕುವ ದೃಶ್ಯ ಕಂಡುಬಂತು. ಇವರ ಮನೆಯ ಪಕ್ಕದಲ್ಲೇ ಹಲವಾರು ಶ್ರೀಮಂತರ ಮನೆಗಳಿದ್ದು ಅವರ ಮನೆಗಳಿಗೆ ನೀರು ನುಗ್ಗಿದಾಗ ಅಗ್ನಿಶಾಮಕ ದಳ ಮತ್ತು ಬಿಬಿಎಂಪಿ ಅಧಿಕಾರಿಗಳು ಬಂದು ಮೋಟರ್ ಹಾಕಿ ನೀರನ್ನು ಹೊರ ಹಾಕಲು ಮುಂದಾದರು. ಆದರೆ ಇವತ್ತಿನವರೆಗೂ ಯಾವುದೇ ಬಿಬಿಎಂಪಿ ಅಧಿಕಾರಿಗಳು ಇವರ ಮನೆಗೆ ಭೇಟಿ ನೀಡಿ ಏನಾಗಿದೆ ಎಂದು ಕೇಳಲು ಕೂಡ ಬಂದಿಲ್ಲ.
ಈಗಾದರೂ ಸ್ಥಳೀಯ ಪ್ರತಿನಿಧಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಕೂಡಲೇ ಅವರ ಮನೆಗೆ ತೆರಳಿ ಅಲ್ಲಿ ತುಂಬಿರುವಂತಹ ನೀರನ್ನು ಹೊರ ಹಾಕಲು ಮುಂದಾಗಬೇಕು ಮತ್ತು ಮಳೆಗೆ ಇವರ ಮನೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ಅವರಿಗೆ ಪರಿಹಾರ ನೀಡಬೇಕು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
19/05/2022 09:09 pm