ಆನೇಕಲ್: ಅಂಗನವಾಡಿಗೆ ಮಂಜೂರಾಗಿದ್ದ ಜಾಗವನ್ನ ಚುನಾಯಿತ ಪ್ರತಿನಿಧಿಗಳ ಕುಮ್ಮಕ್ಕಿನಿಂದ ಕಬಳಿಕೆ ಮಾಡಲು ಹುನ್ನಾರ ನಡೆಸಿರುವ ಘಟನೆ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ನಗರದಲ್ಲಿ ನಡೆದಿದೆ.
ಕುವೆಂಪುನಗರದಲ್ಲಿರುವ ಅಂಗನವಾಡಿ ಜಾಗಕ್ಕೆ ಇಂದು ತಾಲೂಕು ಪ್ರಭಾರ ಅಧಿಕಾರಿ ಮುರಳಿ ಹಾಗೂ ಸಿಡಿಪಿಒ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪರಿಶೀಲನೆ ನಡೆಸುತ್ತಿದ್ದ ವೇಳೆ ಊರಿನ ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೆ ಮಾತಿನ ಚಕಮಕಿ ನಡೆದಿದೆ.
2005ರಲ್ಲಿ ಅಂಗನವಾಡಿಗೆ ಸಮಂದೂರು ಗ್ರಾಮ ಪಂಚಾಯಿತಿಯಿಂದ ಮಂಜೂರಾಗಿತ್ತು. ಅಂಗನವಾಡಿಯ ಪಕ್ಕದ ಜಾಗ ಜಯಮ್ಮನವರಿಗೆ ಆಶ್ರಯ ಯೋಜನೆ ಅಡಿಯಲ್ಲಿ ಹಕ್ಕು ಪತ್ರವನ್ನು ನೀಡಲಾಗಿತ್ತು. ಆ ಜಾಗವನ್ನು ಜಯಮ್ಮನವರು ರಾಮಚಂದ್ರಾರೆಡ್ಡಿ ಎಂಬವರಿಗೆ ಮಾರಾಟ ಮಾಡಿದ್ದರು.
ಆದರೆ, ಈ ಜಾಗದ ಪಕ್ಕದಲ್ಲಿ ಇರುವ ಅಂಗನವಾಡಿ ಜಾಗವನ್ನ ಚುನಾಯಿತ ಪ್ರತಿನಿಧಿಗಳ ಕುಮ್ಮಕ್ಕಿನಿಂದ ಕಬಳಿಕೆ ಮಾಡಲು ಸಂಚು ರೂಪಿಸಿದ್ದರು. ಜೊತೆಗೆ ಆ ಜಾಗದ ಬದಲಾಗಿ ಬೇರೆ ಕಡೆ ಕೊಡಲು ಮುಂದಾಗಿದ್ದರು. ಹೀಗಾಗಿ ಊರಿನ ಗ್ರಾಮಸ್ಥರು ಬೇಡಿಕೆ ಮೇರೆಗೆ ಆ ಜಾಗವನ್ನು ಕಾಯ್ದಿರಿಸಿದ್ದಾರೆ. ಇನ್ನು ಸಮಂದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೋದಂಡ ಹಾಗೂ ತಾಲೂಕು ಅಧಿಕಾರಿಗಳು ಮತ್ತೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
-ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
Kshetra Samachara
27/04/2022 07:59 am