ಆನೇಕಲ್: 5 ಕೋಟಿ ರೂ ಮೌಲ್ಯದ ಸರ್ಕಾರಿ ಕೆರೆ ಏರಿ ಖರಾಬು ಜಾಗ ಒತ್ತುವರಿ ತೆರವು ಕಾರ್ಯಚರಣೆ ನಡೆಸಿ ಸರ್ಕಾರದ ವಶಪಡಿಸಿಕೊಳ್ಳುವಲ್ಲಿ ತಹಶೀಲ್ದಾರ್ ಪಿ. ದಿನೇಶ್ ಯಶಸ್ವಿಯಾಗಿದ್ದಾರೆ.
ಆನೇಕಲ್ ತಾಲ್ಲೂಕಿನ ಸೂರ್ಯನಗರ 1ನೇ ಹಂತಕ್ಕೆ ಹೊಂದಿಕೊಂಡಿರುವ ಇಗ್ಗಲೂರು ಸರ್ವೆ ನಂಬರ್ 163ರಲ್ಲಿ 29 ಗುಂಟೆ ಸರ್ಕಾರಿ ಕೆರೆ ಏರಿ ಖರಾಜು ಸೇರಿ ಶುಭ ಡೆವಲಪರ್ ರಾಮು, ಬಿಸಿಸಿ ಡೆವಲಪರ್ ಮುರಳಿ ರೆಡ್ಡಿ ಎಂಬುವವರು ಒತ್ತುವರಿ ಮಾಡಿ ಆವರಣ ನಿರ್ಮಿಸಿಕೊಂಡಿದ್ದನ್ನು ಗಮನಿಸಿದ ತಾಲೂಕು ಆಡಳಿತ ತೆರವುಗೊಳಿಸಿದೆ.
ಭೂಪರಿವರ್ತನೆ ಮಾಡಿಕೊಂಡು 5 ಕೋಟಿ ಬೆಲೆ ಬಾಳುವ ಭೂಮಿಯನ್ನು ಕಬಳಿಸಿರುವುದು ಮೇಲ್ನೋಟಕ್ಕೆ ಸರ್ವೆ ಮುಖಾಂತರ ಆರೋಪ ಬಂದಿದ್ದರಿಂದ ಜೆಸಿಬಿಗಳ ಮೂಲಕ ತಾಲೂಕು ಆಡಳಿತ ಅಕ್ರಮ ಬಡಾವಣೆ ಸುತ್ತ ನಿರ್ಮಾಣ ಮಾಡಿದ್ದ ಆವರಣ ಕೆಡವಿ ಬಳಿಕ ಕಂದಕ ನಿರ್ಮಾಣ ಮಾಡಿ ಸರ್ಕಾರಿ ಭೂಮಿ ಎಂದು ನಾಮಫಲಕವನ್ನು ಹಾಕಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಪಿ ದಿನೇಶ್, ಆನೇಕಲ್ ತಾಲೂಕಿನಲ್ಲಿ ಈಗಾಗಲೇ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಾಣ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ, ಮುಂದಿನ ದಿನಗಳಲ್ಲಿ ಸರ್ಕಾರಿ ಬೇಲಿಗಳನ್ನು ಒತ್ತುವರಿ ಮಾಡಿ ಬಡವರಿಗೆ ಸೈಟುಗಳನ್ನು ಮಾರಾಟ ಮಾಡುವವರಿಗೆ ಇದು ಎಚ್ಚರಿಕೆ ಗಂಟೆ ಎಂದರು..
PublicNext
13/04/2022 10:45 pm