ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾತ್ರೋರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ: ಬಜೆಟ್ ಗಾತ್ರ 10,480 ಕೋಟಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2022-23ನೇ ಹಣಕಾಸು ವರ್ಷದ ಬಜೆಟ್ ರಾತ್ರೋರಾತ್ರಿ ಮಂಡನೆಯಾಗಿದೆ. ರಾತ್ರಿ 11.30ಕ್ಕೆ ಬಜೆಟ್ ಪ್ರತಿಯನ್ನು ಬಿಬಿಎಂಪಿ ವೆಬ್​ಸೈಟ್​ಗೆ ಅಪ್​ಲೋಡ್ ಮಾಡಲಾಗಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ರಾತ್ರಿ 8.30ಕ್ಕೆ ವಿಧಾನಸೌಧದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ₹ 10,480 ಕೋಟಿ ಗಾತ್ರದ ಬಿಬಿಎಂಪಿ ಬಜೆಟ್​ ಮಂಡಿಸಿದರು.

ವಿಶೇಷಚೇತನರ ಅಭಿವೃದ್ಧಿಗೆ ₹ 370 ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ₹ 346 ಕೋಟಿ, ಕಲ್ಯಾಣ ಕಾರ್ಯಕ್ರಮಕ್ಕೆ ₹ 428 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ ₹ 1,469 ಕೋಟಿ, ಆರೋಗ್ಯ ವಲಯಕ್ಕೆ ₹ 75 ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ₹ 9,951 ಕೋಟಿ ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬಜೆಟ್ ಗಾತ್ರ ₹ 529 ಕೋಟಿ ಹೆಚ್ಚಾಗಿದೆ.

ಬಿಬಿಎಂಪಿ ಬಜೆಟ್ ಎಂದು ಮಂಡನೆಯಾಗಲಿದೆ ಎಂಬುದು ಕಳೆದ ಕೆಲ ದಿನಗಳಿಂದ ಚರ್ಚೆಯ ವಿಷಯವಾಗಿತ್ತು. ಮಾರ್ಚ್ 30ರಂದು ಬಜೆಟ್ ಮಂಡನೆಯಾಗಬಹುದು ಎಂದು ಅಮದಾಜಿಸಲಾಗಿತ್ತು. ಆದರೆ ಕೊನೆಯ ಗಳಿಗೆಯವರೆಗೂ ದಿನಾಂಕ ಅಂತಿಮಗೊಂಡಿರಲಿಲ್ಲ. ಆರ್ಥಿಕ ವರ್ಷವು ಮಾರ್ಚ್ 31ಕ್ಕೆ ಮುಗಿಯಲಿದೆ. ಏಪ್ರಿಲ್ 1ರ ಒಳಗೆ ಬಜೆಟ್ ಮಂಡನೆಯಾಗದಿದ್ದರೆ ಸಮಸ್ಯೆಯಾಗಲಿದೆ ಎಂದು ಹೇಳಲಾಗಿತ್ತು. ಪ್ರತಿವರ್ಷವೂ ಬಜೆಟ್​ಗಳನ್ನು ಮುಂದಿನ ಆರ್ಥಿಕ ವರ್ಷ ಆರಂಭವಾಗುವುದಕ್ಕೆ ಕನಿಷ್ಠ ಮೂರು ವಾರ ಮೊದಲು ಅಂಗೀಕರಿಸಬೇಕು ಎನ್ನುವ ನಿಯಮವಿದೆ. ಅದರಂತೆ ಮಾರ್ಚ್ 10ರ ಒಳಗೆ ಬಜೆಟ್ ಮಂಡನೆಯಾಗಬೇಕಿತ್ತು. ಆದರೆ ಬಜೆಟ್ ಮಂಡನೆ ತಡವಾದ ಕಾರಣ, ಬಿಬಿಎಂಪಿ ಕಾಯ್ದೆಯ 196ನೇ ವಿಧಿ ಉಲ್ಲಂಘನೆಯಾದಂತೆ ಆಗಿದೆ.

ಕರ್ನಾಟಕ ಸರ್ಕಾರವು ಬಿಬಿಎಂಪಿಗೂ ‘ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ವಿತ್ತೀಯ ಹೊಣೆಗಾರಿಕೆ ಕಾಯ್ದೆ-2003’ ಅನ್ವಯಗಳಿಸಿದೆ. ಹೀಗಾಗಿ ನಾಲ್ಕು ವರ್ಷಗಳ ಸಂಯುಕ್ತ ವಾರ್ಷಿಕ ಅಭಿವೃದ್ಧಿ ದರ (ಸಿಎಜಿಆರ್) ಅಧರಿಸಿಯೇ ಬಿಬಿಎಂಪಿ ಬಜೆಟ್ ಗಾತ್ರ ನಿರ್ಧರಿಸಬೇಕಾದ ಅನಿವಾರ್ಯತೆಯಲ್ಲಿತ್ತು. ಈ ಲೆಕ್ಕಾಚಾರದಲ್ಲಿ ಬಿಬಿಎಂಪಿ ಬಜೆಟ್ ಗಾತ್ರವು ₹ 7 ಸಾವಿರ ಕೋಟಿ ಮಿತಿಯ ಒಳಗೆ ಇರುತ್ತದೆ ಎಂದು ಪಾಲಿಕೆ ಮೂಲಗಳು ಹೇಳಿದ್ದವು. ಆದರೆ ಇದೀಗ ಬಿಬಿಎಂಪಿ ಬಜೆಟ್ ಗಾತ್ರವನ್ನು ₹ 10 ಸಾವಿರ ಕೋಟಿ ದಾಟಿಸಿದೆ.

ನಿಯಮಗಳ ಅನ್ವಯ ಬಜೆಟ್ ಮಂಡನೆಯಾಗಿದ್ದರೆ ಈ ವರ್ಷದ ಬಜೆಟ್ ಗಾತ್ರವು 9 ಸಾವಿರ ಕೋಟಿಯ ಒಳಗೆ ಇರಬೇಕಿತ್ತು. ಆದರೆ ಶಾಸಕರ ಒತ್ತಡ ಮತ್ತಿತರ ಕಾರಣಗಳಿಂದ ಬಜೆಟ್ ಗಾತ್ರ ಹೆಚ್ಚಾಗಿದೆ. ಕೊವಿಡ್​ ಹೊಡೆತದಿಂದ ನಗರದ ವ್ಯಾಪಾರ-ವಹಿವಾಟು ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ.

Edited By :
Kshetra Samachara

Kshetra Samachara

01/04/2022 09:03 am

Cinque Terre

2.57 K

Cinque Terre

0

ಸಂಬಂಧಿತ ಸುದ್ದಿ