ಬೆಂಗಳೂರು: ಕೆಂಪೇಗೌಡ ಅಂತ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಎತ್ತರಿಸಿದ ಮಾರ್ಗದ ಕಾಮಗಾರಿ ಆರಂಭವಾಗಿದ್ದು, ಕಾಂಕ್ರೀಟ್ ಕಂಬಗಳ ನಿರ್ಮಾಣದ ಕೆಲಸ ಭರದಿಂದ ಸಾಗಿದೆ.
ಕೆ.ಆರ್.ಪುರಂ -ಹೆಬ್ಬಾಳ ಮಾರ್ಗದ ಮೂಲಕ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 36.44 ಕಿ.ಮೀ ಉದ್ದದ ಮಾರ್ಗದ 2(b) ಸಿವಿಲ್ ಕಾಮಗಾರಿಗಳನ್ನು ಮೂರು ಪ್ಯಾಕೇಜ್ ಗಳಾಗಿ ವಿಂಗಡಿಸಲಾಗಿದೆ. ಈ ಮಾರ್ಗದ ವಯಡಕ್ಟ್ ಹಾಗೂ ನಿಲ್ದಾಣಕ್ಕೆ ಬೇಕಾಗಿರುವ 2.23 ಲಕ್ಷ ಚದರ ಮೀಟರ್ ಜಾಗದ ಪೈಕಿ 2.15 ಲಕ್ಷ ಚದರ ಮೀಟರ್ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದೆ.
ಕೆ.ಆರ್.ಪುರಂ ದಿಂದ ಹೆಬ್ಬಾಳದ ವರೆಗಿನ ಕಾಮಗಾರಿ ಪ್ರಾರಂಭವಾಗಿಲ್ಲ. ಆದರೆ ಹೆಬ್ಬಾಳದಿಂದ ಕೆ.ಆರ್.ಪುರಂ ವರೆಗೆ ಅಲ್ಲಲ್ಲಿ ಕಾಮಗಾರಿ ಆರಂಭವಾಗಿದೆ. ಹೆಬ್ಬಾಳದಿಂದ ಯಲಹಂಕವರೆಗೆ ಮಣ್ಣು ಪರೀಕ್ಷೆ ಕಾರ್ಯ ನಡೆಯುತ್ತಿದ್ದರೇ , ಯಲಹಂಕ ದಿಂದ ಮುಂದಕ್ಕೆ ವಿಮಾನ ನಿಲ್ದಾಣದವರೆಗೆ ಪಿಲ್ಲರ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
Kshetra Samachara
30/03/2022 08:20 pm