ರಾಜಾಜಿನಗರ: ಸಿಲಿಕಾನ್ ಸಿಟಿಯ ಹಲವೆಡೆ ಮ್ಯಾನ್ ಹೋಲ್ ಗಳ ಸಮಸ್ಯೆಯಂತೂ ಕಾಮನ್ ಆಗ್ಬಿಟ್ಟಿದೆ.. ಸಿಟಿ ಸೆಂಟರ್ ನ ಹೈಫೈ ಏರಿಯಾಗಳಲ್ಲಿ ಒಂದು ರಾಜಾಜಿನರ.. ಈಗ ರಾಜಾಜಿನಗರದ ಮುಖ್ಯ ರಸ್ತೆಯಲ್ಲೂ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.. ಸದ್ಯ ರಾಜಾಜಿನಗರದ ಬಸ್ ನಿಲ್ದಾಣದ ಬಳಿ ಇರುವ ಮ್ಯಾನ್ ಹೋಲ್ ಕಳೆದ ಒಂದು ವಾರದಿಂದ ಗಬ್ಬು ನಾರುತ್ತಿತ್ತು.. ಹೀಗಾಗಿ ಅದನ್ನು ದುರಸ್ತಿ ಮಾಡಲು ಇಂದು ಜಿಡಬ್ಲ್ಯೂಎಸ್ ಎಸ್ ಬಿ ಮುಂದಾಗಿದೆ.. ಹೆಚ್ಚು ವಾಹನಗಳು ಓಡಾಡುವ ರಸ್ತೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ.. ಆದ್ರೆ ವಾಹನಗಳ ಮಾರ್ಗ ಬದಲಾಯಿಸುವುದಾಗಲೀ ಅಥವಾ ಸೂಚನಾ ಫಲಕಗಳನ್ನು ಹಾಕುವುದಾಗಲೀ, ಕಾರ್ಮಿಕರಿಗೆ ಗ್ಲೌಸ್, ಮಾಸ್ಕ್ ನೀಡುವ ಗೋಜಿಗೆ ಜಿಡಬ್ಲ್ಯೂಎಸ್ಎಎಸ್ ಬಿ ಮುಂದಾಗಿಲ್ಲ.. ಅವೈಜ್ಞಾನಿಕ ದುರಸ್ತಿಯಿಂದ ದುರ್ವಾಸನೆ ಮಧ್ಯೆ ಜನ ಓಡಾಡುವಂತಾಗಿದೆ.
Kshetra Samachara
24/03/2022 12:49 pm