ಬೆಂಗಳೂರು: 2021ರ ಡಿಸೆಂಬರ್‌ನಲ್ಲಿ ಬಿಎಂಟಿಸಿ ವೋಲ್ವೊ ಬಸ್‌ಗಳ ದರ ಕಡಿತದ ನಂತರ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ಆದಾಯ ಕೂಡ ಹೆಚ್ಚಿದೆ. ಬಿಎಂಟಿಸಿ ಡಿಸೆಂಬರ್ 17ರಿಂದ ವೋಲ್ವೊ ಬಸ್‌ಗಳ ದರವನ್ನು ಶೇ.34ರಷ್ಟು ಇಳಿಸಿದೆ. ವೋಲ್ವೊ ಬಸ್‌ಗಳ ಮಾಸಿಕ ಆದಾಯವು 2022ರ ಜನವರಿಯಲ್ಲಿ 1.8 ಕೋಟಿ ರೂ. ಇತ್ತು. ಫೆಬ್ರವರಿಯಲ್ಲಿ ಆದಾಯವು 2.6 ಕೋಟಿ ರೂ.ಗೆ ಏರಿಕೆಯಾಗಿದೆ.
ಅಲ್ಲದೇ, ಪ್ರತಿ ಬಸ್‌ಗೆ ಸರಾಸರಿ ದೈನಂದಿನ ಪ್ರಯಾಣಿಕರು ಜನವರಿಯಲ್ಲಿ 20,126 ಇದ್ದಿದ್ದು, ಫೆಬ್ರವರಿಯಲ್ಲಿ 31,718ಕ್ಕೆ ಏರಿಕೆ ಯಾಗಿದೆ. ಸದ್ಯ 300ಕ್ಕೂ ಹೆಚ್ಚು ಎಸಿ ಬಸ್‌ಗಳನ್ನು ನಿರ್ವಹಿಸುತ್ತಿದ್ದೇವೆ. ಮೇ ತಿಂಗಳ ವೇಳೆಗೆ ಎಲ್ಲ ಬಸ್‌ಗಳನ್ನು ನಿರ್ವಹಿಸುವ ಯೋಜನೆ ಇದೆ. ಪ್ರತಿ ಕಿ.ಮೀ ಗೆ ನಮ್ಮ ಆದಾಯ ಹೆಚ್ಚಿದೆ. ಹಾಗಾಗಿ ನಾವು ಸಕಾರಾತ್ಮಕವಾಗಿದ್ದೇವೆ. ಸಿಬ್ಬಂದಿ ವೆಚ್ಚ ಮತ್ತು ಡೀಸೆಲ್ ವೆಚ್ಚ ಪ್ರಮುಖವಾಗಿವೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ, ಎಂದು ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎ.ವಿ.ಸೂರ್ಯ ಸೇನ್ ಮಾಹಿತಿ ನೀಡಿದ್ದಾರೆ.
PublicNext
13/03/2022 10:23 pm