ಬೆಂಗಳೂರು: ಪೀಣ್ಯ ಮೇಲ್ಸೇತುವೆ ಬಿರುಕಿನ ಪರಿಣಾಮ 50 ದಿನದಿಂದ ನಗರ ಫುಲ್ ಟ್ರಾಫಿಕ್ ಕಿರಿಕಿರಿ ಉಂಟಾಗಿತ್ತು. ಆದ್ರೆ, ಒತ್ತಾಯದ ಮೇಲೆ ಈಗ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಸಿಕ್ಕಿದರೂ ಗುಣಮಟ್ಟದ ಬಗ್ಗೆ ಇನ್ನೂ ಸೂಕ್ತ ಮೌಲ್ಯ ಮಾಪನ ಆಗಿಲ್ಲ!
ಇದ್ರಿಂದ ನಗರದ ಬಿಡಿಎ, ಬಿಬಿಎಂಪಿ, ಸರ್ಕಾರ, ರಾ.ಹೆ.ಯಿಂದ ಹಲವು ಮೇಲ್ಸೇತುವೆ ನಿರ್ಮಾಣ ಆಗಿದೆ.
ದೀರ್ಘಾವಧಿಗೆ ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್ ನಿರ್ಮಾಣವೂ ಆಗಿದೆ. ಸದ್ಯ ಪೀಣ್ಯ ಮೇಲ್ಸೇತುವೆ ಹತ್ತೇ ವರ್ಷದಲ್ಲಿ ಸಂಚಾರಕ್ಕೆ ಯೋಗ್ಯ ಅಲ್ಲ ಎಂದು ಸಾಬೀತಾಗಿದೆ!
50 ವರ್ಷ ಬಾಳಿಕೆ ಬರಬೇಕಾದ ಮೇಲ್ಸೇತುವೆ 10 ವರ್ಷಕ್ಕೇ ಕಳಪೆ! ಈ ಬಗ್ಗೆ ತನಿಖೆಯಾಗ್ಬೇಕು. ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು. ಜತೆಗೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಫ್ಲೈ ಓವರ್ ಗಳ ಗುಣಮಟ್ಟದ ಮೌಲ್ಯ ಮಾಪನವಾಗಬೇಕು ಅಂತ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಆಗ್ರಹಿಸಿದ್ದಾರೆ.
ಇನ್ನು, ಬಿಬಿಎಂಪಿ ಹೈ ಅಲರ್ಟ್ ಆಗಿದ್ದು, ಬಿಬಿಎಂಪಿ, ಬಿಡಿಎ ನಿರ್ಮಿಸಿದ ಎಲ್ಲಾ ಮೇಲ್ಸೇತುವೆ, ಕೆಳ ಸೇತುವೆಗಳ ಪಟ್ಟಿ ಸಿದ್ಧಗೊಳಿಸಿದೆ. ಸದ್ಯ ನಮ್ಮಲ್ಲಿ 50 ವರ್ಷಗಳ ಹಿಂದಿನ ಮೇಲ್ಸೇತುವೆಗಳೂ ಇವೆ. ಆದ್ರೆ ಯಾವುದರಲ್ಲೂ ಸಮಸ್ಯೆ ಇಲ್ಲ. ನಾಗರಿಕರು ನಿರ್ಭೀತಿಯಿಂದ ಸಂಚರಿಸಬಹುದು. ಬೇಕಿದ್ರೆ, ಮತ್ತೊಮ್ಮೆ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಗುಣಮಟ್ಟ ಪರಿಶೀಲಿಸಲು ಸಿದ್ಧರಿದ್ದೇವೆ ಎಂದು ವಾಹನ ಸವಾರರಿಗೆ ಬಿಬಿಎಂಪಿ ಭರವಸೆ ನೀಡಿದೆ.
Kshetra Samachara
19/02/2022 11:10 am