ವರದಿ: ಗಣೇಶ್ ಹೆಗಡೆ
ಬೆಂಗಳೂರು: ಸಾರಿಗೆ ಸಚಿವರೇ, ಒಂದ್ಸಲ ಬಿಎಂಟಿಸಿ ಕಡೆ ನೋಡಿ. ಅಧಿಕಾರಿಗಳು ನಿಗಮ ನಷ್ಟದಲ್ಲಿದೆ ಹೇಳ್ಕೊಂಡು ಪ್ರಯಾಣಿಕರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಹೈಟೆಕ್ ಬಸ್ ಗಳನ್ನು ನೀಡಿ ನಮ್ಮಂತಹ ಸೇವೆ ರಾಷ್ಟ್ರದಲ್ಲಿ ಎಲ್ಲೂ ಇಲ್ಲ ಅಂತ ಕೊಚ್ಚಿಕೊಳ್ಳುವ ಬಿಎಂಟಿಸಿ ಬಸ್ ಗಳು ಆಯೋಗ್ಯವಾಗಿವೆ!
ಕೆಲ ದಿನಗಳಿಂದ ನಗರದಲ್ಲಿ ಬಸ್ ಎಲ್ಲೆಂದರಲ್ಲಿ ಕೆಟ್ಟು ನಿಲ್ಲೋದು, ಇದ್ದಕ್ಕಿದ್ದಂತೆ ಹೊತ್ತಿ ಉರಿಯೋದು, ಅಪಘಾತವಾಗೋದು ಮಾಮೂಲಾಗಿದೆ. ಕಳೆದ ವಾರ ಬಿಎಂಟಿಸಿ ಬಸ್ ರಸ್ತೆ ಮಧ್ಯೆಯೇ ಧಗಧಗನೇ ಉರಿದಿದ್ದು, ಮೊನ್ನೆ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ʼಕಿಲ್ಲರ್ ಬಿಎಂಟಿಸಿ ಬಸ್ʼ ಅಂತ ಹಣೆಪಟ್ಟಿಯ ಬಸ್ ಗಳು ಆತಂಕ ಹೆಚ್ಚಿಸಿದೆ.
ಡಿಪೋಗಳಿಂದ ಹೊರ ಬಂದ ನಂತರವೇ ಮಾರ್ಗ ಮಧ್ಯೆ ನೂರಾರು ಬಸ್ ಗಳು ಕೆಟ್ಟು ನಿಲ್ಲುತ್ತಿವೆ. ಪ್ರಾಬ್ಲಂ ಅಂತ ಗೊತ್ತಿದ್ರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದಕ್ಕೆ ಕಾರಣ ಸ್ಪೇರ್ ಪಾರ್ಟ್ಸ್ ಸಪ್ಲೈ ಇಲ್ವಂತೆ! ಇದರಿಂದ ಹಳೆ ಸ್ಪೇರ್ ಪಾರ್ಟ್ಸ್ ಗಳಿಂದ ಬಸ್ ಕೈ ಕೊಡ್ತಿದೆ.
ಡಿಪೋಗಳಲ್ಲಿ ಪರೀಕ್ಷಕರು ತಪಾಸಣೆ ಬಳಿಕ ಘಟಕ ವ್ಯವಸ್ಥಾಪಕ ಪರಿಶೀಲಿಸಿ ಲಾಗ್ ಬುಕ್ ಗೆ ಸಹಿ ಹಾಕಿದ ನಂತರವೇ ಬಸ್ ರಸ್ತೆಗಿಳಿಸಬೇಕು. ಆದರೆ, ನಗರ 48 ಡಿಪೋಗಳಲ್ಲಿ ಲಾಗ್ ಶೀಟ್ ಇಲ್ಲದೆ ಪರಿಶೀಲನೆ ನಡೆಸದೆ ಬಸ್ ಗಳು ರೋಡಿಗಿಳಿಯುತ್ತಿವೆ. ಬಿಎಂಟಿಸಿಯಲ್ಲಿ 6500 ಬಸ್ ಗಳಿದ್ದು, ಸಾಕಷ್ಟು ಬಸ್ ಗಳು ಸೀದಾ ರಸ್ತೆಗಿಳಿಸಲಾಗುತ್ತಿದೆ. ಹೀಗಾಗಿ ಎಲ್ಲೆಂದರಲ್ಲಿ ಕೆಟ್ಟುನಿಂತು ಅವಾಂತರ ಆಗುತ್ತಿವೆ.
PublicNext
09/02/2022 09:02 am