ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಸಮನ್ವಯ ಕೊರತೆಯಿಂದ ನಗರದಲ್ಲಿ ರಸ್ತೆಗುಂಡಿ ಸಮಸ್ಯೆ, ಕಾಮಗಾರಿ ವಿಳಂಬ ಸಾಮಾನ್ಯವಾಗಿತ್ತು. ಇದೀಗ ಶುಲ್ಕ ಪಾವತಿ ವಿಚಾರಕ್ಕೆ ಸ್ಥಳೀಯ ಸಂಸ್ಥೆಗಳ ನಡುವೆಯೇ ತಿಕ್ಕಾಟ ಆರಂಭವಾಗಿದೆ.
ಹೌದು... ಬಿಬಿಎಂಪಿ , ಜಲಮಂಡಳಿ ಹಾಗೂ ಬಿಡಿಎ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಬೆಸ್ಕಾಂಗೆ 85 ಕೋಟಿ ರೂ. ಪಾವತಿ ಮಾಡದೆ ಬಾಕಿ ಇಟ್ಟಿದೆ. ಹೀಗಾಗಿ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಡಿತ ಮಾಡುವ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ನೀರು ಸರಬರಾಜು ಮಂಡಳಿ 44.04 ಕೋಟಿ ರೂ., ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) 2.57 ಕೋಟಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 38.56 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. 15 ದಿನಗಳ ಗಡುವು ನೀಡಲಾಗಿದ್ದು, ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಕ್ಕೆ ಬೆಸ್ಕಾಂ ನಿರ್ಧರಿಸಿದೆ.
ಇನ್ನೂ ನಾನಾ ಇಲಾಖೆಗಳಿಂದ 3 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿಯಿದ್ದು, ಇಂಧನ ಇಲಾಖೆಗೆ ತೀವ್ರ ಸಂಕಷ್ಟ ಎದುರಾಗಿದೆ.
ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಸೆಸ್ಕ್ ವ್ಯಾಪ್ತಿಯಲ್ಲಿನ ಗ್ರಾಪಂಗಳಿಗೆ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಸರಕಾರದ ನಾನಾ ವಿದ್ಯುತ್ ಯೋಜನೆಗಳ ಸಬ್ಸಿಡಿಗೆ 12 ಸಾವಿರ ಕೋಟಿ ರೂ. ಬಾಕಿ ಉಳಿದುಕೊಂಡಿದೆ.
ರಾಜ್ಯದ ವಿವಿಧ ಗ್ರಾಪಂಗಳು, ಕುಡಿಯುವ ನೀರು ಸರಬರಾಜು ಮತ್ತು ಬೀದಿದೀಪ ಸ್ಥಾವರಗಳಿಗೆ ಸಂಬಂಧಿಸಿ ವಿದ್ಯುತ್ ಸರಬರಾಜು ಕಂಪನಿಗಳಿಗೆ 3,794 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ.
ರಾಜ್ಯದಲ್ಲಿ ಒಟ್ಟು 6022 ಗ್ರಾಪಂಗಳಿದ್ದು, ಈ ಪೈಕಿ ಬೆರಳೆಣಿಕೆಯಷ್ಟು ಮಾತ್ರ ವಿದ್ಯುತ್ ಬಿಲ್ ಪಾವತಿಸಿವೆ.
* ಯಾವ ನಿಗಮಕ್ಕೆ ಎಷ್ಟು ಕೋಟಿ?:
ಬೆಸ್ಕಾಂ ₹2440
ಮೆಸ್ಕಾಂ ₹60
ಹೆಸ್ಕಾಂ ₹292
ಜೆಸ್ಕಾಂ ₹743
ಸೆಸ್ಕ್‌ಗೆ ₹188
ಬೈಟ್: ಬಿ.ಆರ್.ಸೋಮಶೇಖರ್, ಪ್ರಧಾನ ವ್ಯವಸ್ಥಾಪಕರು ಬೆಸ್ಕಾಂ
Kshetra Samachara
18/11/2021 12:20 pm