ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: : ದೇವನಹಳ್ಳಿಯಲ್ಲಿ ಭಾರೀ ಮಳೆಗೆ 47 ಮನೆಗಳಿಗೆ ಹಾನಿ

ದೇವನಹಳ್ಳಿ: ದೇವನಹಳ್ಳಿ ಸುತ್ತಮುತ್ತಾ ಭಾರಿ ಮಳೆಗೆ 47ಮನೆಗಳಿಗೆ ಹಾನಿಯಾಗಿದೆ. ದೇವನಹಳ್ಳಿಯ ಕಸಬಾ ಹೋಬಳಿಯಲ್ಲಿ 8 ಮನೆ, ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ 16 ಮನೆ, ವಿಜಯಪುರ ವ್ಯಾಪ್ತಿಯಲ್ಲಿ 12 ಮನೆ ಮತ್ತು ಕುಂದಾಣ ಹೋಬಳಿಯಲ್ಲಿ 9 ಮನೆಗಳು ಹಾನಿಗೊಳಗಾಗಿವೆ.

ಅರ್ಧಕ್ಕೂ ಹೆಚ್ಚು ಮನೆ ಗೋಡೆ & ಮೇಲ್ಛಾವಣಿ ಕುಸಿದಿದ್ದರೆ, ಇನ್ನರ್ಧ ಮನೆಗಳು ಸಂಪೂರ್ಣ ನಾಶವಾಗಿವೆ. ಮನೆ ದಾಖಲೆ, ಬ್ಯಾಂಕ್ ಅಕೌಂಟ್ ಸೇರಿ ಮನೆ ಹಾನಿಗೆ ಸಂಬಂಧಿಸಿದ ಎಲ್ಲಾ ಸೂಕ್ತ ದಾಖಲೆ ಇದ್ದರೆ, ಮನೆ ಹಾನಿ ಪರಿಹಾರ ಕೊಡ್ತೇವೆ ಎಂದು ದೇವನಹಳ್ಳಿ ತಹಶಿಲ್ದಾರ್ ಶಿವರಾಜ್ ಪಬ್ಲಿಕ್ ನೆಕ್ಸ್ಟ್ ಗೆ ಸ್ಪಷ್ಟಪಡಿಸಿದರು.

ಪ್ರಮುಖವಾಗಿ ಚನ್ನರಾಯಪಟ್ಟಣ & ವಿಜಯಪುರ ಹೋಬಳಿಯಲ್ಲಿ ಹೆಚ್ಚು ಮನೆಗಳು ನಾಶವಾಗಿವೆ. ಅಗಲಕೋಟೆ ಒಂದೇ ಗ್ರಾಮದಲ್ಲಿ 5ಮನೆ ನಾಶವಾಗಿವೆ. ಇನ್ನು ಏರ್ಪೋರ್ಟ್ ಗೆ ಹೊಂದಿಕೊಂಡ ಅಣ್ಣೇಶ್ವರ ಗ್ರಾಮದಲ್ಲಿ ಶಾಂತಮ್ಮನಿಗೆ ಸೇರಿಗೆ ಮನೆ ಬಿದ್ದು ಅವಾಂತರ ಸೃಷ್ಟಿಯಾಗಿದೆ. ಮನೆ ಕಳೆದುಕೊಂಡವರ ಗೋಳು ಹೇಳತೀರದು.

ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ಅಣ್ಣೇಶ್ವರ ಗ್ರಾಮಪಂಚಾಯ್ತಿ ಸದಸ್ಯರು ಕಾಟಾಚಾರಕ್ಕೆ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ. ಅಧಿಕಾರಿಗಳು & ಜನಪ್ರತಿನಿಧಿಗಳು ಕಾಟಾಚಾರಕ್ಕೆ ಬರ್ತಾರೆ, ಹೋಗ್ತಾರೆ, ಪರಿಹಾರ ಇನ್ನು ಸಿಕ್ಕಿಲ್ಲ ಅಂತಾರೆ ಮನೆ ಕಳೆದುಕೊಂಡವರು.

ಅಕಾಲಿಕ ಮಳೆಯಿಂದ ದೇವನಹಳ್ಳಿ ಸುತ್ತಾಮುತ್ತಾ ಮನೆಗಳು ಮಾತ್ರ ನಾಶವಾಗಿವೆ. ತೊಂದರೆಗೊಳಗಾದ ಮನೆಗಳಿಗೆ ಪರಿಹಾರ ಸಿಗಲಿ. ಯಾವುದೇ ಪ್ರಾಣಹಾನಿಯಾಗದೇ ಇರಲಿ ಎಂದಷ್ಟೆ ಆಶಿಸೋಣ..

Edited By :
PublicNext

PublicNext

08/09/2022 08:52 pm

Cinque Terre

34.36 K

Cinque Terre

0

ಸಂಬಂಧಿತ ಸುದ್ದಿ