ಇಲ್ಲಿ ದಿನನಿತ್ಯ ಸಮಸ್ಯೆಗಳು... ಎಲ್ಲಿ ನೋಡಿದ್ರೂ ಬರೀ ಕೆಸರು. ಓಡಾಡುವುದು ಹೇಗೆ ? ವ್ಯಾಪಾರ ಮಾಡುವುದು ಹೇಗೆ ?ಇಷ್ಟೆಲ್ಲ ಪ್ರಶ್ನೆ ಉದ್ಭವವಾಗಿರೋದು ವಿಜಯನಗರದ ಮಾರ್ಕೆಟ್ ರಸ್ತೆಯಲ್ಲಿ.
ಹೌದು... ವಿಜಯನಗರದ ಮಾರ್ಕೆಟ್ ರಸ್ತೆಯಲ್ಲಿ( BWSSB ) ಕಾಮಗಾರಿಗೋಸ್ಕರ ರಸ್ತೆ ಅಗೆದು ತಿಂಗಳಾದ್ರು ಇನ್ನೂ ಒಂದು ಚೂರು ಕಾಮಗಾರಿ ಸ್ಟಾರ್ಟ್ ಆಗಿಲ್ಲ. ಇದ್ರಿಂದ ವ್ಯಾಪಾರಸ್ಥರು ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಅದ್ರಲ್ಲೂ ತಳ್ಳುಗಾಡಿ ವ್ಯಾಪಾರಸ್ಥರಿಗಂತೂ ದಿನದ ಕೂಲಿ ಸಿಗೋದು ಕಷ್ಟ ಆಗಿದ್ದು, ಬಾಡಿಗೆ ಕಟ್ಟಲಾಗದೇ ದಿನನಿತ್ಯ ತೊಂದರೆ ಅನುಭವಿಸುತ್ತಿದ್ದೇವೆ ಎಂದರು.
ಇನ್ನು, ಈ ವಿಜಯನಗರ ಬಹಳಷ್ಟು ವ್ಯಾಪಾರ ವಹಿವಾಟು ನಡೆಯುವಂತಹ ಪ್ರದೇಶ. ಇದ್ರಿಂದ ಬೇಗ ಕಾಮಗಾರಿ ಮುಗಿಸಿಕೊಟ್ಟು, ವ್ಯಾಪಾರಿಗಳನ್ನು ಉಳಿಸಬೇಕಾಗಿದೆ. ಈ ಬಗ್ಗೆ ಸಣ್ಣದೊಂದು ವಾಕ್ ಥ್ರೂ...
- ರಂಜಿತಾ ಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
18/07/2022 08:13 pm