ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ರೈಲು ಕಾಮಗಾರಿ ಹೈಸ್ಪೀಡ್

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ರೈಲು ಕಾಮಗಾರಿ ಚುರುಕುಗೊಂಡಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ಮುಂದಾಗಿದೆ.

ಚಿಕ್ಕಜಾಲ ಬಳಿ ಮೊದಲ ಪಿಲ್ಲರ್‌ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದ್ದು, ಪಿಲ್ಲರ್‌ ಮೇಲೆ ಅಳವಡಿಸುವ 'ಯು' ಆಕಾರದ ಗರ್ಡರ್‌ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆ.ಆರ್‌.ಪುರ- ಹೆಬ್ಬಾಳ ಮಾರ್ಗದ ಮೂಲಕ ವಿಮಾನ ನಿಲ್ದಾಣ ಸಂಪರ್ಕಿಸುವ 36.44 ಕಿ.ಮೀ. ಉದ್ದದ ಸಿವಿಲ್‌ ಕಾಮಗಾರಿಯನ್ನು 3 ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಪ್ಯಾಕೇಜ್‌ ಗುತ್ತಿಗೆಯನ್ನು ನಾಗಾರ್ಜುನ ಕನ್‌ ಸ್ಟ್ರಕ್ಷನ್‌ ಕಂಪನಿ (ಎನ್‌ಸಿಸಿ) ಪಡೆದುಕೊಂಡಿದೆ.

ಈ ಮಾರ್ಗದ ನಿಲ್ದಾಣಗಳಿಗೆ ಅಗತ್ಯವಿರುವ 2.23 ಲಕ್ಷ ಚದರ ಮೀಟರ್‌ ಜಾಗದ ಪೈಕಿ 2.15 ಲಕ್ಷ ಚದರ ಮೀಟರ್‌ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆ.ಆರ್‌.ಪುರದಿಂದ ಹೆಬ್ಬಾಳ ವರೆಗಿನ ಮಾರ್ಗದಲ್ಲಿ ಮರಗಳ ಸ್ಥಳಾಂತರ ಆಗಬೇಕಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಹೆಬ್ಬಾಳದಿಂದ ವಿಮಾನ ನಿಲ್ದಾಣ ಮೆಟ್ರೋ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

ಟಿನ್‌ ಫ್ಯಾಕ್ಟರಿ ಬಳಿ ಉಕ್ಕಿನ ಗರ್ಡರ್‌ ಅಳವಡಿಕೆ ಕಾಮಗಾರಿಯೂ ಚುರುಕಿನಿಂದ ನಡೆಯುತ್ತಿದ್ದು, ಉಕ್ಕು ಮತ್ತು ಕಬ್ಬಿಣದಿಂದ ತಯಾರಿಸಿದ 150 ಟನ್‌ ತೂಕದ 2 ಗರ್ಡರ್‌ ಅಳವಡಿಸಲಾಗಿದೆ. ಸಾಮಾನ್ಯವಾಗಿ ದೊಡ್ಡ ರಸ್ತೆ ಅಥವಾ ಸೇತುವೆ ನಿರ್ಮಾಣ ವೇಳೆ ಇಂತಹ ಉಕ್ಕಿನ ಗರ್ಡರ್‌ ಅಳವಡಿಸಲಾಗುತ್ತದೆ. ಈ ಮಾರ್ಗ ನಿರ್ಮಾಣದ ಹೊಣೆ ಹೊತ್ತಿರುವ ಐಟಿಡಿ ಇಂಡಿಯಾ ಕಂಪನಿ ದೊಡ್ಡ ಕ್ರೇನ್‌ಗಳನ್ನು ಬಳಸಿ ಈ ಗರ್ಡರ್‌ ಅಳವಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Edited By :
Kshetra Samachara

Kshetra Samachara

21/06/2022 07:51 pm

Cinque Terre

1.97 K

Cinque Terre

0

ಸಂಬಂಧಿತ ಸುದ್ದಿ