ಬಿಬಿಎಂಪಿ ಮರು ವಿಂಗಡಣೆ ಅಂತಿಮ ವರದಿಯನ್ನು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿದೆ. ಇದೀಗ ಪಾಲಿಕೆಗೆ ಹೊಸ ತಲೆನೋವು ಸೃಷ್ಟಿಯಾಗಿದೆ. ಆ ಕುರಿತ ವರದಿ ಇಲ್ಲಿದೆ...
ಅಂದ ಹಾಗೆ ವಾರ್ಡ್ ಮರು ವಿಂಗಡಣೆ ಅಂತಿಮವಾಗುತ್ತಿದ್ದಂತೆ ವಾರ್ಡ್ ಮೀಸಲು ತಲೆನೋವು ಬಿಬಿಎಂಪಿ ಅಧಿಕಾರಿಗಳಿಗೆ ಎದುರಾಗಿದೆ. ಹೌದು... ಸುಪ್ರೀಂ ಕೋರ್ಟ್ ನೀಡಿದ್ದ ಡೆಡ್ ಲೈನ್ ಜುಲೈ 22ರ ಗಡುವು ಹತ್ತಿರ ಬಂದಿದೆ. ಇದೀಗ ಸದ್ಯ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಪೂರ್ಣವಾಗಿದೆ. ಇನ್ನೂ ಮುಖ್ಯವಾಗಿ ಮೀಸಲು ನಿಗದಿ, ಕೋರ್ಟ್ ನಲ್ಲಿ ಮತ್ತಷ್ಟು ಕಾಲಾವಕಾಶ ಕೋರುವ ಸಾಧ್ಯತೆಗಳಿವೆ. ಜನಸಂಖ್ಯೆ ಅನುಗುಣವಾಗಿ 198 ವಾರ್ಡ್ 243 ವಾರ್ಡ್ ಗಳಾಗಿ ಪರಿವರ್ತನೆ ಮಾಡಲಾಗಿದೆ.
ಸಾರ್ವಜನಿಕರಿಂದ ಆಕ್ಷೇಪಣೆ ಪಡೆದು ಅದನ್ನು ಪರಿಹರಿಸಲು 15 ದಿನ ಕಾಲಾವಕಾಶ ಬೇಕಾಯ್ತು. ಇದೇ ರೀತಿ ಮೀಸಲು ಪಟ್ಟಿಗೂ ಇಷ್ಟೇ ಕಾಲ ಬೇಕಾಗುತ್ತದೆ. ಅಷ್ಟರೊಳಗೆ ಸುಪ್ರೀಂ ನೀಡಿದ್ದ ಗಡುವು ಅಂತ್ಯವಾಗಲಿದ್ದು, ಮತ್ತಷ್ಟು ಕಾಲಾವಕಾಶ ಕೇಳುವ ಸಾಧ್ಯತೆ ಇದೆ.
ಇನ್ನೂ 243 ವಾರ್ಡ್ ಗಳಲ್ಲಿ 28 ವಾರ್ಡ್ ಗಳ ಗಡಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ. ಅಲ್ಲದೆ ಕೆಲವೊಂದು ವಾರ್ಡ್ ಅದಲು ಬದಲಾಗಿದೆ. ಆಂಧ್ರಹಳ್ಳಿ ವಾರ್ಡ್ ದೊಡ್ಡ ಬಿದ್ರಕಲ್ಲು ವಾರ್ಡ್ ಮಾಡಲಾಗಿದೆ. ಕೆಂಗೇರಿ ಉಪ ನಗರ ಕೆಂಗೇರಿ, ಹೆಮ್ಮಗೆಪುರ ಹಿಂದೆ ತಲಘಟ್ಟಪುರ ವಾರ್ಡ್ ಆಗಿತ್ತು. ಒಟ್ಟು 24 ವಾರ್ಡ್ ಗಳ ಹೆಸ್ರು ಅದಲು ಬದಲಾಗಿದೆ.
ಇದೇ ವೇಳೆ ಕೆಲವೊಂದು ಆಕ್ಷೇಪಣೆಗೆ ಸರ್ಕಾರ ಸೊಪ್ಪು ಹಾಕಿಲ್ಲ. ಜಯನಗರ ವಾರ್ಡ್ ಅಶೋಕಸ್ತಂಭ ಮಾಡಿದ್ದಕ್ಕೆ ಮಾಜಿ ಮೇಯರ್ ಗಂಗಾಂಬಿಕೆ ವಿರೋಧಿಸಿದ್ರು. ಅಲ್ಲದೆ ಭೈರಸಂದ್ರ ವಾರ್ಡ್ ಗಡಿ ಬದಲಾವಣೆ ಒತ್ತಾಯಿಸಿ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು. ಇದಕ್ಕೆ ಪಾಲಿಕೆ ಹಾಗೂ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ.
- ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
16/07/2022 12:33 pm