ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಎಂಟಿಸಿಯಲ್ಲಿ ಮಹಿಳಾ ಸುರಕ್ಷತೆಗೆ ಇಲ್ಲ ಒತ್ತು; ಸರ್ಕಾರದ ಸವಲತ್ತು ಬೇರೆಡೆ ಖರ್ಚು!

ಬಿಎಂಟಿಸಿ ಬಸ್‌ ಗಳಲ್ಲಿ ಹಗಲು ರಾತ್ರಿ ಎನ್ನದೇ ಮಹಿಳೆಯರು ಓಡಾಡ್ತಾರೆ. ಆದ್ರೆ, ಅವರ ಸುರಕ್ಷತೆಗೆ ಬಿಎಂಟಿಸಿ ಕೈಗೊಂಡ ಕ್ರಮ ಅಷ್ಟಕ್ಕಷ್ಟೇ. ಕಾರಣ ಏನಂದ್ರೆ ಬಜೆಟ್ ಕೊರತೆ. ಇದನ್ನ ಗಮನಿಸಿದ ಕೇಂದ್ರ ಸರ್ಕಾರ ನಿರ್ಭಯಾ ಸ್ಕೀಂ ನಡಿ ಬಿಎಂಟಿಸಿಗೆ 33.64 ಕೋಟಿ ರೂ. ಬಿಡುಗಡೆಗೊಳಿಸಿತ್ತು. ರಾಜ್ಯ ಸರ್ಕಾರವೂ 23 ಕೋಟಿ ರೂ. ನಲ್ಲಿ ಬಸ್‌ ಗಳಲ್ಲಿ ಮಹಿಳಾ ಸುರಕ್ಷತೆಗೆ ಒತ್ತು ನೀಡಿ, ಮುಖ್ಯವಾಗಿ ಸಿಸಿ ಟಿವಿ ಅಳವಡಿಸಿ ಎಂದು ಸೂಚಿಸಿತ್ತು.

ಆದ್ರೆ, ಈ ಹಣ ಬಿಎಂಟಿಸಿ ಕೈ ಸೇರಿ ವರ್ಷಗಳೇ ಕಳೆದ್ರೂ ಬಸ್ ಗಳಲ್ಲಿ ಸಿಸಿ ಟಿವಿ‌ ಕ್ಯಾಮೆರಾ ಹಾಕಿಲ್ಲ‌! ಈ ಹಣವನ್ನು ದುರುಪಯೋಗಿಸಿ ಬೇರೆ ಉದ್ದೇಶಕ್ಕೆ ಬಳಸಿಕೊಂಡಿದೆ ಎಂಬ ಆರೋಪ ಕೇಳಿ ಬರ್ತಿದೆ.‌ ಹಲವು ವರ್ಷಗಳ ಹಿಂದೆ ಹಾಕಿದ್ದ ಕ್ಯಾಮೆರಾಗಳು ವರ್ಕ್ ಆಗ್ತಾಯಿಲ್ಲ.‌ ಅವುಗಳನ್ನೂ ಬಿಎಂಟಿಸಿ ಬದಲಿಸಿಲ್ಲ, ಹೊಸದಾಗಿ ಅಳವಡಿಕೆಯನ್ನೂ ಮಾಡ್ತಾಯಿಲ್ಲ‌.

ಒಟ್ಟು 6,500 ಬಿಎಂಟಿಸಿ ಬಸ್ ಗಳಿದ್ದು ‌ನಿರ್ಭಯಾ ಸ್ಕೀಂನಡಿ 5 ಸಾವಿರ ಬಸ್‌ ಗಳಿಗೆ ಸಿಸಿ ಟಿವಿ ಅಳವಡಿಸಲು ಸೂಚಿಸಲಾಗಿತ್ತು. ಆದ್ರೆ ಇಲ್ಲಿವರೆಗೂ ಒಂದು ಬಸ್ ಗೂ ಕ್ಯಾಮೆರಾ ಹಾಕಿಲ್ಲ! ವಿಪರ್ಯಾಸ ಅಂದ್ರೆ ರಾತ್ರಿ ಪಾಳಿ ಕಾರ್ಯನಿರ್ವಹಿಸೋ ಬಸ್‌ ಗಳಲ್ಲೂ ಕ್ಯಾಮೆರಾ ಇಲ್ಲ.

ಕಾಸು ಕೊಟ್ರೂ ನಿಗಮ ಕೆಲಸ ಮಾಡದೆ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ.‌‌ ಬಿಎಂಟಿಸಿ, ಆದಾಯ ತರುವ‌‌ ಕೆಲಸ ಮಾಡದೆ ಬೇಡದ ಯೋಜನೆಗೆ ದುಂದುವೆಚ್ಚ ಮಾಡುತ್ತಿದೆ.‌ ಕೆಲ ದಿನಗಳ‌‌ ಹಿಂದೆ ಬಿಎಂಟಿಸಿಗೆ ಕ್ಯಾಮೆರಾ ಅಳವಡಿಕೆಗೆ ಪರೀಕ್ಷಾರ್ಥ ಕಾರ್ಯ ನಡೆಯುತ್ತಿದ್ದು, ‌ಆದ್ರೆ ಅದನ್ನು ಇಂಪ್ಲಿಮೆಂಟ್ ಮಾಡುವ ಕೆಲಸ ಮಾತ್ರ ಇನ್ನೂ ಆಗಿಲ್ಲ.

Edited By :
Kshetra Samachara

Kshetra Samachara

31/03/2022 12:56 pm

Cinque Terre

2.4 K

Cinque Terre

1

ಸಂಬಂಧಿತ ಸುದ್ದಿ