ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೆಹಲಿ ನಂತರ ಬೆಂಗಳೂರಿನ ಏರ್ಪೋರ್ಟ್‌ನಿಂದ ಯುನೈಟೆಡ್ ಪಾರ್ಸಲ್ ಸೇವೆ ಆರಂಭ

ಬೆಂಗಳೂರು: ದೆಹಲಿ ನಂತರ ಇದೀಗ ಬೆಂಗಳೂರಿನಲ್ಲಿ ಇಂದಿನಿಂದ ಹೊಸ ಯುಪಿಎಸ್ (United Parcel Services) ಇಂಟರ್ ಕಾಂಟಿನೆಂಟಲ್ ಜಾಗತಿಕ ಸ್ಮಾರ್ಟ್ ಲಾಜಿಸ್ಟಿಕ್ ಸೇವೆ ಪ್ರಾರಂಭವಾಗಿದೆ. ಇದರಿಂದ ಭಾರತ ಏಷ್ಯಾ, ಯೂರೋಪ್ ಮತ್ತು ಅಮೆರಿಕ ಖಂಡಗಳೊಂದಿಗೆ ಸ್ಮಾರ್ಟ್ ಲಾಜಿಸ್ಟಿಕ್ ವ್ಯಾಪಾರ ಅವಕಾಶ ಪಡೆಯುವ ಮೂಲಕ ಸಂಪರ್ಕ ಸೇತುವೆಯಾಗಲಿದೆ. ಹೊಸ ಬೋಯಿಂಗ್ 747-8 ವಿಮಾನ ಭಾರತದಲ್ಲಿ ಸೇವೆ ಪ್ರಾರಂಭಿಸಿದೆ.

ಈಗಾಗಲೇ ದೆಹಲಿ 2020ರ ಹಣಕಾಸು ವರ್ಷದಲ್ಲಿ 400 ಬಿಲಿಯನ್ ಡಾಲರ್ ರಫ್ತನ್ನು ಭಾರತ ಪೂರೈಸಿದೆ. ಈ ವಿಮಾನ ಸೇವೆ ಸಣ್ಣ ಉದ್ದಿಮೆ, ವ್ಯಾಪಾರಗಳಿಗೆ ಉತ್ತೇಜನ ನೀಡಿಲಿದೆ. ನಮ್ಮ‌ ಗ್ರಾಹಕರಿಗೆ ಉತ್ತಮ‌ ಸೇವೆ ನೀಡುವುದು ನಮ್ಮ ಕರ್ತವ್ಯ ಎಂದು ಯುಪಿಎಸ್ ಭಾತರದ ನಿರ್ದೇಶಕರು ತಿಳಿಸಿದರು.

ಈಗಾಗಲೇ ದೇವನಹಳ್ಳಿ ವಿಮಾನ ನಿಲ್ದಾಣ ಗ್ರಾಹಕರಿಗೆ ಉತ್ತಮ ಸೇವೆ, ಸೌಲಭ್ಯ, ಕರೋನಾ ನಿಯಂತ್ರಣ, ಸ್ವಚ್ಛತೆ ಕ್ಷೇತ್ರಗಳಲ್ಲಿ ದೇಶ- ವಿದೇಶಗಳ ಪ್ರಶಸ್ತಿ ಗೌರವಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. 2020ರಲ್ಲಿ ದೆಹಲಿಯಲ್ಲಿ ಯುಪಿಎಸ್ ಸೇವೆ ಪ್ರಾರಂಭವಾಗಿತ್ತು. ಇದೀಗ ಬೆಂಗಳೂರು ಯುಪಿಎಸ್ ಮೂಲಕ ದಕ್ಷಿಣ ಭಾರತದ ಗೇಟ್ ವೇ ಯಾಗಿ, ಇಂಡೋ ಪೆಸಿಪಿಕ್ ವಲಯದ ವಾಣಿಜ್ಯ ಸಂಪರ್ಕ ಕೊಂಡಿಯಾಗಿ ಬೆಂಗಳೂರು ಮತ್ತು KIA ದಾಪುಗಾಲಿಡ್ತಿವೆ ಯುಪಿಎಸ್ ಸೇವೆ ಮೂಲಕ ಬೆಂಗಳೂರನ್ನು ವಿಶ್ವಕ್ಕೆ ಸ್ವಾಗತಿಸಲು ಖುಷಿಯಾಗ್ತಿದೆ ಎಂದು ಕೆಂಪೇಗೌಡ ಏರ್‌ಪೋರ್ಟ್ ಅಧಿಕಾರಿ ತಿಳಿಸಿದರು.

ಅದೇನೆ ಇರಲಿ ದೆಹಲಿ ನಂತರ ದಕ್ಷಿಣ ಭಾರತದ ಬೆಂಗಳೂರು ಯೂರೋಪ್ ಮೂಲದ ಯುಪಿಎಸ್ ಸೇವೆ ಒದಗಿಸುತ್ತಿರುವ ದಕ್ಷಿಣ ಭಾರತದ ಗೇಟ್ವೇಯಾಗಿ ಅಭಿವೃದ್ಧಿ ಆಗ್ತಿರುವುದು ನಮ್ಮೆಲ್ಲರ ಹೆಮ್ಮೆ.

Edited By :
PublicNext

PublicNext

20/07/2022 09:24 am

Cinque Terre

32.73 K

Cinque Terre

0

ಸಂಬಂಧಿತ ಸುದ್ದಿ