ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಸ ವಿಲೇವಾರಿ ಮೀಸಲಿದ್ದ ಹಣ ದುರ್ಬಳಕೆ ಆರೋಪ...?

ವರದಿ-ಗಣೇಶ್ ಹೆಗಡೆ

ಬೆಂಗಳೂರು: ನಗರದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಕಟಿಸಿದ್ದ ಶುಭ್ರ ಬೆಂಗಳೂರು ಯೋಜನೆಯ 19 ಕೋಟಿ ಮೊತ್ತ ಮಹದೇವಪುರ ಕ್ಷೇತ್ರದ ರಸ್ತೆ ಅಭಿವೃದ್ಧಿ ಬಳಕೆಗೆ ಆಕ್ಷೇಪ ವ್ಯಕ್ತವಾಗಿದೆ.

ಮಿಟ್ಟಗಾನಹಳ್ಳಿ ಹಾಗೂ ಕಣ್ಣೂರಿನ ಸುತ್ತಮುತ್ತಲಿನ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಈ ಮೊತ್ತ ವಿನಿಯೋ ಗಿಸಲು ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ.‌ಒಟ್ಟು 17 ಕಡೆ ಕಾಮಗಾರಿಗಳನ್ನು ನಡೆಸ ಲಾಗುತ್ತಿದ್ದು, ಇದಕ್ಕಾಗಿ ಅಲ್ಪಾವಧಿ ಟೆಂಡರ್ ಕರೆದಿದೆ.

ನಗರದ ಅಭಿವೃದ್ಧಿ ಕಾಮಗಾರಿ ಗಳಿಗಾಗಿ ರಾಜ್ಯ ಸರ್ಕಾರವು 2019 ಸಾಲಿನ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ ಪ್ರಕಟಿಸಿ 8,015 ಕೋಟಿ ಅನುದಾನ ಒದಗಿಸಿತು. ಈ ಕ್ರಿಯಾಯೋಜನೆಯಲ್ಲಿ ಕಸ ನಿರ್ವಹಣೆಗೆ 584.35 ಕೋಟಿ ಮೀಸಲಿಡಲಾಯಿತು. ಇದರಲ್ಲಿ ಕಸ ವಿಲೇವಾರಿ ಸ್ಥಳಗಳ ಪ್ರದೇಶಾ ಭಿವೃದ್ಧಿ ಕಾಮಗಾರಿಗೆ 528.85 ಕೋಟಿ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಕಸ‌ ವಿಲೇವಾರಿ ಕಾಮಗಾರಿಗಳಿಗೆ 55.50 ಕೋಟಿಯಷ್ಟೇ ಉಳಿಯಿತು.

Edited By : Nagaraj Tulugeri
PublicNext

PublicNext

03/01/2022 02:15 pm

Cinque Terre

14.19 K

Cinque Terre

0

ಸಂಬಂಧಿತ ಸುದ್ದಿ