ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ʼವರುಣ ಪ್ರತಾಪ ಹಿನ್ನೆಲೆʼ; ಬಿಬಿಎಂಪಿ ಕಮಿಷನರ್ JNCASR ಭೇಟಿ, ಪರಿಶೀಲನೆ

ಬೆಂಗಳೂರು: ಕಳೆದ 2 ವರ್ಷಗಳಿಂದ ಬೆಂಗಳೂರು ನಗರದಲ್ಲಿ ಮಳೆ ಜಾಸ್ತಿ ಆಗಿದೆ. ಹಾಗೆಯೇ ಅಕ್ರಮ ಕಾಮಗಾರಿ ಹಾಗೂ ನಗರೀಕರಣದಿಂದಾಗಿ ಮಳೆನೀರು ಮನೆ, ವಸತಿ ಸಮುಚ್ಚಯ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೂ ನುಗ್ಗಿ ಸಮಸ್ಯೆಗಳಾಗಿದ್ದವು.

ಅದರಲ್ಲೂ ಯಲಹಂಕ BBMP ವಲಯದ ಜಕ್ಕೂರಿನ ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರಕ್ಕೆ ನೀರು ನುಗ್ಗಿ ಅವಾಂತರ ಆಗಿತ್ತು. ಹಿರಿಯ ವಿಜ್ಞಾನಿ CNR ರಾವ್, ಪ್ರಧಾನಿಗೆ ಪತ್ರ ಬರೆದ ನಂತರ CM ಬೊಮ್ಮಾಯಿ ಭೇಟಿ ಕೊಟ್ಟು ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಬಿಬಿಎಂಪಿ ಕಮಿಷನರ್ JNCASR ಕೇಂದ್ರಕ್ಕೆ ಭೇಟಿ ನೀಡಿ, ಅಧಿಕಾರಿಗಳ ಜೊತೆ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಿದ್ದಾರೆ. ಈ ಎಲ್ಲಾ ವಿಷಯ ಕುರಿತು ಕಮಿಷನರ್ & JNCASR ಅಧಿಕಾರಿಗಳ ಜೊತೆ ನಮ್ಮ ಸೀನಿಯರ್ ರಿಪೋರ್ಟರ್ ಸುರೇಶ್ ಬಾಬು ನಡೆಸಿರುವ EXCLUSIVE ವರದಿ ನಿಮಗಾಗಿ...

Edited By :
PublicNext

PublicNext

03/06/2022 04:43 pm

Cinque Terre

33.86 K

Cinque Terre

0

ಸಂಬಂಧಿತ ಸುದ್ದಿ