ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಧಿನಗರದಲ್ಲಿ ಗೂಂಡಾಗಿರಿ...ಒತ್ತುವರಿ ಪ್ರಶ್ನಿಸಿದ್ರೆ ದಾದಾಗಿರಿ..ಕ್ರಮ ಕೈಗೊಳ್ತಾರಾ ಕಮೀಷ್ನರ್ ತುಷಾರ್ ಗಿರಿ..?

ಜನಪರ ವರದಿ-- ಪ್ರವೀಣ್ ರಾವ್

ಬೆಂಗಳೂರು: ಒಂದು ಕಡೆ ಬಿಬಿಎಂಪಿ ಚುನಾವಣೆ ಅನ್ನೋದು ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿದ್ದರೆ ಈ ಕಡೆ ಬಿಬಿಎಂಪಿ ಅಧಿಕಾರಿಗಳು ಗಡದ್ಧಾಗಿ ತಿಂದು ಭರ್ಜರಿ ನಿದ್ದೆಯಲ್ಲಿದ್ದಾರೆ.. ಪರಿಣಾಮ? ಇಡೀ ಬೆಂಗಳೂರಿನಾದ್ಯಂತ ಅಕ್ರಮ ಕಾಮಗಾರಿಗಳು, ಫುಟ್ ಪಾತ್ ಒತ್ತುವರಿ, ಪಾರ್ಕು ಒತ್ತುವರಿ, ಕೆರೆಒತ್ತುವರಿ ಎಗ್ಗುಸಿಗ್ಗಿಲ್ಲದೇ ನಡೆಯುತ್ತಿದೆ..

ಸರ್ಕಾರವಂತೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೆಣಗಾಟದಲ್ಲಿ ತೊಡಗಿಕೊಂಡಿದೆ. ಹಾಗಿರುವಾಗ ಅಕ್ರಮ ಎಸಗುವವರನ್ನು ಯಾರೂ ಹೇಳೋರಿಲ್ಲಾ ಕೇಳೋರಿಲ್ಲಾ ಎನ್ನುವಂತಾಗಿ ಹೋಗಿದೆ.. ಅಕ್ರಮ,ಅನ್ಯಾಯವನ್ನು ಪ್ರಶ್ನಿಸಲು ಹೋದ ಮಾಧ್ಯಮದವರ ಮೇಲೆ ಹಲ್ಲೆ ನಡೆಸುವ ಗೂಂಡಾಗಳು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ...

ಹೌದು ಈ ಘಟನೆ ನಡೆದಿದ್ದು ಬೆಂಗಳೂರಿನ ಹೃದಯಭಾಗವಾದ ಗಾಂಧಿನಗರದ 5ನೇ ಮುಖ್ಯರಸ್ತೆಯಲ್ಲಿ ಹೀಗೆ ಎಗರೆಗರಿ ಮೇಲೆ ಬೀಳುತ್ತಿರುತ್ತಿರುವವನ ಹೆಸರು ಗೂಂಡಾ ಫಹಾದ್ ಅಹ್ಮದ್..‌! ಈತ ಗೋಝಿಲೋ ಪ್ರಾಪರ್ಟಿಸ್ ಪ್ರೈವೇಟ್ ಕಂಪನಿ ಸಾಕುತ್ತಿರೋ ಬಾಡಿಗೆ ಗೂಂಡಾ..! ಹಾಗೂ ಈತನ ಗೂಂಡಾ ಪಡೆ...!

ಇಷ್ಟಕ್ಕೂ ಈತನಿಗೆ ಅದೇನಾಗಿ ಹೋಗಿದೆ ಅನ್ನುವುದನ್ನು ವಿವರಿಸೋಕ್ಕೆ ಮುನ್ನ ಒಂದಿಷ್ಟು ವಿವರಗಳನ್ನ ಕೊಡ್ತೇವೆ ನೋಡಿ... ತಮಗೆಲ್ಲಾ ಗೊತ್ತೇ ಇದೆ ಜನಗಳು ಯಾವುದೇ ಸಮಸ್ಯೆಯನ್ನು ಪಬ್ಲಿಕ್ ನೆಕ್ಸ್ಟ್ ಜೊತೆ ಹೇಳಿಕೊಂಡ ತಕ್ಷಣ ಅದಕ್ಕೆ ಸ್ಪಂದಿಸುವ ನಮ್ಮ ತಂಡ ಕೂಡಲೇ ಅದರ ಪರಿಹಾರಕ್ಕೆ ಮುಂದಾಗುತ್ತದೆ.

ಈ ಹಿನ್ನಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಪಬ್ಲಿಕ್ ನೆಕ್ಸ್ಟ್ ಜನಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಅದರಲ್ಲೂ ಇತ್ತೀಚಿನ ದಿನಮಾನಗಳಲ್ಲಿ ಬೆಂಗಳೂರು ಮಹಾನಗರದಲ್ಲಿ‌ ತನ್ನ ವಿಶಿಷ್ಟವಾದ ಜನಪರವಾದ ಕಾರ್ಯವೈಖರಿಯಿಂದ ಜನಮನ್ನಣೆ ಗಳಿಸಿದೆ.ಹೀಗಿರುವಾಗ ಬೆಂಗಳೂರಿನ ಹೃದಯ ಭಾಗವಾದ ಗಾಂಧಿನಗರದ 5ನೇ ಮುಖ್ಯರಸ್ತೆಯ Foot path ಅನ್ನು ರಾಜಾರೋಷವಾಗಿ ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಾಣ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಅಕ್ರಮದ ಕುರಿತು ನಮಗೆ ಕೆಲವುದಿನಗಳಿಂದ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದವು..‌

ಹಲವರು ಈಗಾಗಲೇ ಸಂಬಂಧಿಸಿದ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನಗಳು ಓಡಾಡೋಕೆ ಆಗದ ಪರಿಸ್ಥಿತಿ ಇದೆ. ನೀವು ಇದರ ಬಗ್ಗೆ ವರದಿ ಮಾಡಿ ಸರ್ ಅಂತ ಮನವಿ ಮಾಡಿದ್ರು..

ಜನರ ಒತ್ತಾಸೆ ಮೇರೆಗೆ ನಾವು ಸ್ಥಳಕ್ಕೆ ಹೋದಾಗ ಅಲ್ಲಿನ ಪರಿಸ್ಥಿತಿ ಕಂಡು ನಾವು ನಿಜಕ್ಕೂ ದಂಗಾಗಿ ಹೋದೆವು.. ರಾಜಧಾನಿ ಬೆಂಗಳೂರಿನ ಅತ್ಯಂತ ಪ್ರಮುಖವಾದ, ಹೃದಯ ಭಾಗ ಅಂತಲೇ ಕರೆಸಿಕೊಳ್ಳುವ ಗಾಂಧಿನಗರದ ಅತ್ಯಂತ ಜನನಿಬಿಢ ರಸ್ತೆ, ಪ್ರತಿಷ್ಟಿತ ರಸ್ತೆ ಅಂತ ಕರೆಸಿಕೊಳ್ಳುವ 5 ನೇ ಮುಖ್ಯ ರಸ್ತೆ..

ಹನುಮಂತಪ್ಪ ರಸ್ತೆ ಈ ರಸ್ತೆಯ ಪಕ್ಕದಲ್ಲಿ ಗೋಝಿಲೋ‌ ಪ್ರಾಪರ್ಟಿಸ್ ಅನ್ನುವ ಕಂಪನಿ ದೊಡ್ಡ ಬಿಲ್ಡಿಂಗ್ ಒಂದನ್ನು ಕಟ್ತಾ ಇದೆ.. ಅವರ ಜಾಗದಲ್ಲಿ ಅವ್ರು ಕಟ್ಕೊಳ್ಲಿ ಅದಕ್ಕೆ ಯಾರ ತಕರಾರು ಇಲ್ಲಾ ಆದರೆ ಈ ಕಂಪನಿಯವ್ರು ಇಡೀ Footpath ನ್ನ ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಬಿಟ್ಟಿದ್ದಾರೆ..

ಸುಮಾರು ಅರ್ಧ ಕಿಲೋ ಮೀಟರ್ Footpath ಉದ್ದಕ್ಕೂ ಇವರದ್ದೇ ದರ್ಬಾರು.. ಜಲ್ಲಿಕಲ್ಲು, ಮರಳು, ಮಣ್ಣು, ಕಬ್ಬಿಣದ ಸಲಾಕೆಗಳು ರಾಶಿ ರಾಶಿ Footpath ಮೇಲೆಯೇ...! ಇನ್ನೂ ವಿಚಿತ್ರ ಅಂದ್ರೆ ಇಡೀ Foot path ನ ಉದ್ದೋ ಉದ್ದಕ್ಕೆ ದೊಡ್ಡ ಶೆಡ್ ನಿರ್ಮಾಣ ಮಾಡಿ ರಾಜಾರೋಷವಾಗಿ ಒತ್ತುವರಿ ಮಾಡ್ಕೊಂಡು ಬಿಟ್ಟಿದ್ದಾರೆ..ಕಳೆದ ಒಂದೂವರೆ ವರ್ಷದಿಂದ ಈ ಒತ್ತುವರಿ ನಡೀತಿದ್ರೂ ಯಾರೂ ಇದರ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲಾ‌‌‌...

Smart ಸಿಟಿ ಕಾಮಗಾಗಿ ಮುಗಿದು ಹೋಗಿದ್ರೂ ಇವ್ರು ಕ್ಯಾರೇ ಅಂತಿಲ್ಲ... ಮೊದಲೇ ಕಿರಿದಾದ ರಸ್ತೆ.. ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್.ರಸ್ತೆ ತಂಬಾ ವಾಹನಗಳ ದಟ್ಟಣೆ.. ಜನಗಳು ಎಲ್ಲಿಂದ ಓಡಾಡಬೇಕು? Foot path ನ ಈ ಒತ್ತುವರಿಯಿಂದಾಗಿ ಜನರು ಜೀವ ಕೈಯಲ್ಲಿ ಹಿಡಿದು ಕೊಂಡು ರಸ್ತೆಯಲ್ಲಿ ಓಡಾಡುವಂತಾಗಿದೆ..

ಅನೇಕ ಅಪಘಾತಗಳು ನಡೆದು ಜನ ಪೆಟ್ಟು ಮಾಡಿಕೊಂಡ ಘಟನೆ ಕೂಡಾ ನಡೆದಿದೆ.‌ ಸಾರ್ವಜನಿಕರು ಮೇಲಿಂದ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟರೂ ಏನೂ ಪ್ರಯೋಜನ ಆಗಿರಲಿಲ್ಲ.. ಕೊನೆಗೆ ಬೇಸತ್ತ ಜನತೆ ಪಬ್ಲಿಕ್ ನೆಕ್ಸ್ಟ್ ಬಳಿ ತಮ್ಮ ದೂರು ಹೇಳಿಕೊಂಡರು. ಇದರ ಕುರಿತು ವರದಿ ಮಾಡಲು ನಮ್ಮ ತಂಡ ಸ್ಥಳಕ್ಕೆ ಹೋದಾಗ ಗೋಝಿಲಾ ಕಂಪನಿಯ ಬಾಡಿಗೆ ಗೂಂಡಾ ಪಡೆ ನಮ್ಮ ಮೇಲೇ ಹಲ್ಲೆಗೆ ಮುಂದಾಯ್ತು.. ಬಟ್ ಪಬ್ಲಿಕ್ ನೆಕಸ್ಟ್ ಇಂತಹ ಯಾವ ದಾದಾಗಿರಿ ಗೂಂಡಾ ಗಿರಿಗೂ ಹೆದರದೆ ಜಗ್ಗದೆ, ಬಗ್ಗದೆ ಸ್ಥಳದಿಂದಲೇ ಈ ವರದಿಯನ್ನು ಮಾಡುತ್ತಿದೆ..

ಹೀಗೆ ನಗರದ ಹೃದಯ ಭಾಗದಲ್ಲೇ ಹೀಗೆ ರಾಜಾರೋಷವಾಗಿ ಅನ್ಯಾಯ, ಅಕ್ರಮ ನಡೀತಿದ್ರೂ ಸಂಬಂಧಿಸಿದ ಇಲಾಖೆ ಅದೆಲ್ಲಿ ಕತ್ತೆ ಮೇಯಿಸ್ತಿದೆಯೋ ಗೊತ್ತಾಗ್ತಿಲ್ಲಾ..

ಕೂಡಲೇ ಇದರ ಬಗ್ಗೆ ಸಂಬಂಧಿಸಿದವರು ಕ್ರಮ ತೆಗೆದುಕೊಂಡು ಈ ಒತ್ತುವರಿಯನ್ನು ತೆರವು ಗೊಳಿಸದೇ ಹೋದರೆ ಪಬ್ಲಿಕ್ ನೆಕ್ಸ್ಟ್ ಜನಾದೋಂಲವನ್ನೇ ಆರಂಭಿಸಬೇಕಾಗುತ್ತದೆ ಎನ್ನುವುದನ್ನು ಈ ಮೂಲಕ ತಿಳಿಯ ಪಡಿಸುತ್ತದೆ...

ಪ್ರವೀಣ್ ರಾವ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..

Edited By : Somashekar
PublicNext

PublicNext

19/08/2022 08:33 pm

Cinque Terre

54.06 K

Cinque Terre

4

ಸಂಬಂಧಿತ ಸುದ್ದಿ