ಬೆಂಗಳೂರು : ಅದು ಬೃಹತ್ ಕಾಮಗಾರಿ ನಡೆಯುತ್ತಿರುವ ಏರಿಯಾ ,, ಹೇಳಿ,,ಕೇಳಿ,,ಲಕ್ಷಂತರ ವೆಹಿಕಲ್ ಓಡಾಡೋ ರಸ್ತೆ,, ಅದರಲ್ಲೂ ಸಿಲಿಕಾನ್ ಸಿಟಿಯ ಸೆಂಟರ್ ಪ್ಲೇಸ್.
ಇಷ್ಟು ಸಾಲದ್ದು ಅಂತ ಆ ರಸ್ತೆ ಮೇಲ್ಭಾಗದಲ್ಲಿ ರೈಲ್ವೆ ಟ್ರಾಕ್ ಕೂಡ ಇದೆ, ಇಷ್ಟೆಲ್ಲ ಗೋತ್ತಿದ್ರು ಬಿಬಿಎಂಪಿ ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳು ರಸ್ತೆಗೆ ಮೋರಿ ಪೈಪ್ ಹಾಕಬೇಕು ಅಂತ ರೈಲ್ವೆ ಟ್ರಾಕ್ ಕೆಳಗಡೆ ಜಿಲೆಟಿನ್ ಸ್ಫೋಟ ಮಾಡಿ ಕಾಮಗಾರಿ ನಡೆಸಿ, ಜನ್ರಿಗೆ ಭಯ ಹುಟ್ಟಿಸುತ್ತಿದ್ದಾರೆ.
ಜಿಲೆಟಿನ್.. ಇದು ಸ್ಪೋಟಕ ವಸ್ತು.. ಇಂತಹ ವಸ್ತು ಬಳಕೆ ಮಾಡ್ಬೇಕು ಅಂದ್ರೆ ಅನುಮತಿ ಪಡೆಯಬೇಕು. ಮುಂಜಾಗ್ರತೆ ವಹಿಸಬೇಕು. ಬಟ್, ಇದ್ಯಾವುದನ್ನು ಗಮನಿಸದೇ ಸಾವಿರಾರು ಜನರ ಜೀವದ ಜೊತೆ ಬಿಬಿಎಂಪಿ ಆಟವಾಡುತ್ತಿದೆ.
ಸಾವಿರಾರು ಜನರನ್ನು ಹೊತ್ತು ಓಡಾಡುವ ರೈಲ್ವೆ ಹಳಿಯ ಕೆಳಗೆ ಸ್ಪೋಟಕ ಜಿಲೆಟಿನ್ ಬಳಕೆ ಮಾಡ್ತಿದೆ. ಕೊಳಚೆ ನೀರು ಹರಿದು ಹೋಗಲು 44 ಮೀಟರ್ ಉದ್ದ ಬೃಹತ್ ಪೈಪ್ ಅಳವಡಿಸಲು ಸುರಂಗ ಕೊರೆಯುವ ಕಾಮಗಾರಿಗೆ ಜಿಲೆಟಿನ್ ಬಳಕೆ ಮಾಡಲಾಗ್ತಿದೆ. ಇದಕ್ಕೆ ಯಾವುದೇ ಪರ್ಮಿಶನ್ ಇಲ್ದೆ ಯಾರಿಗೂ ಗೊತ್ತಾದ ಹಾಗೆ ಕಲ್ಲುಗಳನ್ನ ಸ್ಪೋಟಗೊಳಿಸುತ್ತಿದ್ದಾರೆ.
ಓಕಳಿಪುರಂನಲ್ಲಿ ಬಿಬಿಎಂಪಿ ಟ್ರಾಫಿಕ್ ಫ್ರೀ ಕಾರಿಡಾರ್ ಮಾಡ್ತಿದ್ದು. ಇದೇ ಜಾಗದಲ್ಲಿ ಮಳೆ ನೀರು ಹಾಗೂ ರಾಜಕಾಲುವೆ ನೀರು ಹರಿದುಹೋಗಲು ಮಾರ್ಗ ನಿರ್ಮಾಣ ಮಾಡ್ತಿದ್ದಾರೆ. ಆದ್ರೆ,ಓಕಳಿಪುರಂ ಜಂಕ್ಷನ್ ಬೆಂಗಳೂರು ಚೆನ್ನೈ ರೈಲ್ವೆ ಮಾರ್ಗದ ಕೆಳಗೆ ರಾಜಕಾಲುವೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಿಬಿಎಂಪಿ ಖಾಸಗಿ ಗುತ್ತಿಗೆದಾರ ಬೃಹತ್ ಆಕಾರದ ಪೈಪ್ ಅಳವಡಿಕೆ ಮಾಡ್ತಿದ್ದಾರೆ.
ಇನ್ನು ರೈಲ್ವೆ ಟ್ರ್ಯಾಕ್ ಕೆಳಗೆ ಬೃಹತ್ ಕಲ್ಲುಗಳು ಬಂದ ಕಾರಣ ಡ್ರೀಲ್ ಬಳಕೆ ಮಾಡಿ ಸುರಂಗ ನಿರ್ಮಾಣ ಮಾಡಬೇಕಿದ್ದ ಗುತ್ತಿಗೆದಾರ ಜಿಲೆಟಿನ್ ಬಳಕೆ ಮಾಡ್ತಿದ್ದಾರೆ. ರಾತ್ರಿಹೊತ್ತು ಜಿಲೆಟಿನ್ ಸ್ಪೋಟಗೊಳಿಸಿ ಸುರಂಗ ನಿರ್ಮಾಣ ಮಾಡ್ತಿದ್ದಾರೆ.
ಮುಖ್ಯವಾಗಿ ಜಿಲೆಟಿನ್ ಬಳಕೆ ಮಾಡಲು ಗುತ್ತಿಗೆದಾರನಿಗೆ ಅನುಮತಿ ಇಲ್ಲ. ರೈಲ್ವೆ ಇಲಾಖೆ ಅಥವಾ ಬಿಬಿಎಂಪಿ ಯಾವುದೇ ಅನುಮತಿ ನೀಡಿಲ್ಲ. ಆದರೂ ಸಹ ರೈಲ್ವೆ ಟ್ರಾಕ್ ಕೆಳಗೆ ಅದರಲ್ಲೂ ಪಿಲ್ಲರ್ ಕೆಳಭಾಗದಲ್ಲಿ ಸ್ಪೋಟಕ ವಸ್ತು ಬಳಕೆ ಮಾಡ್ತಿದ್ದಾರೆ. ಇದರಿಂದ ರೈಲ್ವೆ ಪಿಲ್ಲರ್ ಗಳಿಗೆ ಹಾನಿಯಾದ್ರೆ ದೊಡ್ಡ ಅನಾಹುತ ಸಂಭವಿಸೋದು ಖಚಿತ.
ಈ ಹಿಂದೆ ರಾಜ್ಯದ ನಾನಾ ಭಾಗಗಳಲ್ಲಿ ಜಿಲೆಟೆನ್ ಸ್ಫೋಟಗೊಂಡು ಬಾರಿ ಅನಾಹುತ ಸಂಭವಿಸಿವೆ, ಈ ಕಹಿ ಘಟನೆ ಮಾಸುವ ಮುನ್ನವೇ ಮತ್ತೆ ಜಿಲೆಟಿನ್ ಸದ್ದು ರಾಜಧಾನಿಯಲ್ಲಿ ಕೇಳಿ ಬರ್ತಿದೆ, ಇತ್ತ ಬಿಬಿಎಂಪಿ ಇಂಜಿನಿಯರ್ ಗೋತ್ತಿದ್ರು ಕಣ್ಣು ಮುಚ್ಚಿ ಕುತ್ತಿರೋದು ನೋಡುದ್ರೆ , ಗುತ್ತಿಗೆದಾರನ ಜೊತೆ ಶಾಮಿಲಾಗಿರುವ ಅನುಮಾನ ವ್ಯಕ್ತವಾಗ್ತಿದೆ.
ಗಣೇಶ್ ಹೆಗಡೆ ಪಬ್ಲಿಕದ ನೆಕ್ಸ್ಟ್ ಬೆಂಗಳೂರು
PublicNext
04/07/2022 08:16 pm