ಬೆಂಗಳೂರು: ನಗರದಲ್ಲಿ ಎಲ್ಲಿ ನೋಡಿದರೂ ಕಸ ಕಸ.. ಈಗಾಗಲೇ ಈ ಬಗ್ಗೆ ನಟ ಅನಿರುಧ್ ಜನ ಜಾಗೃತಿ ಕೆಲಸ ಮಾಡುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದಿಟ್ಟು ಮರಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ನಟ ಅನಿರುಧ್ ವಿಶೇಷ ಮನವಿ ಸಲ್ಲಿಸಿದ್ದಾರೆ. ಮರಗಳಿಗೆ ಜಾಹೀರಾತು ಪೇಪರ್ ಅಟ್ಟಿಸೋದು, ಸ್ಟೆಪ್ಲರ್ ಹೊಡೆಯೋದು, ಕೇಬಲ್ ಸುತ್ತುವು ಮರದ ಅವನತಿಗೆ ಕಾರಣವಾಗುತ್ತಿದೆ. ನಮಗೆ ಪ್ರಾಣವಾಯು (ಆಕ್ಸಿಜನ್) ನೀಡುವ ಮರಗಳಿಗೆ ಹೀಗೆ ಹಿಂಸೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಮರಗಳಿಗೆ ಜೀವವಿದೆ ಎನ್ನುವುದನ್ನು ಮರೆಯಬೇಡಿ ಎಂದು ತಿಳಿ ಹೇಳಿದ್ದಾರೆ.
PublicNext
25/04/2022 11:45 am