ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಧಾನಿಯಲ್ಲಿ ಕ್ಯಾಬ್ ಕೊರತೆ: ಹಿಂಗಾದ್ರೆ ಕಷ್ಟ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಈಗ ಕ್ಯಾಬ್‌ಗಳಿಗೆ ಬರ ಬಿದ್ದಿದೆ. ಇದಕ್ಕೂ ಕೂಡ ಕೊರೊನಾ ಎಫೆಕ್ಟ್ ಕಾರಣ ಎನ್ನಬಹುದು. ಮಹಾನಗರದಲ್ಲಿ ಕೊರೊನಾ ಸೋಂಕು ಉಲ್ಬಣವಾದಾಗ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಅವಕಾಶ ನೀಡಿದ್ದವು. ಹೀಗಾಗಿ ದಿನನಿತ್ಯ ತಮ್ಮ ಕೆಲಸದ ಸ್ಥಳಗಳಿಗೆ ಹೋಗುವ ಉದ್ಯೋಗಿಗಳು ಮನೆಯಿಂದಲೂ ಕೆಲಸ ಮಾಡಿದ್ದರು. ಇದು ಕ್ಯಾಬ್ ವ್ಯವಹಾರಕ್ಕೆ ಹೊಡೆತ ಕೊಟ್ಟಿತ್ತು

ಆದರೆ ನಂತರದ ದಿನಗಳಲ್ಲಿ ಕೋವಿಡ್ ತೀವ್ರತೆ ಕಡಿಮೆಯಾಗಿ ಕಚೇರಿ ಕೆಲಸಗಳು ಶುರುವಾದಾಗ ಚಾಲಕರ ಕೊರತೆ ಎದುರಾಗಿತ್ತು. ಹೀಗಾಗಿ ನಿಗದಿತ ಅವಧಿಯೊಳಗೆ ಕ್ಯಾಬ್ ತಲುಪುವುದು ಕಡಿಮೆಯಾಗತೊಡಗಿದಾಗ ಕ್ಯಾಬ್ ಮೇಲಿನ ಪ್ರಯಾಣಿಕರ ಅವಲಂಬನೆಯೂ ಕಡಿಮೆಯಾಗಿದೆ ಎನ್ನಬಹುದು.

2018ರ ಪ್ರಾರಂಭದಲ್ಲಿ ನಗರದಲ್ಲಿಯೇ ಸುಮಾರು 75 ಸಾವಿರ ಕ್ಯಾಬ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಆದರೆ, ಕೊರೋನಾ ಹಿನ್ನೆಲೆಯಿಂದ ಜಾರಿಯಾದ ಲಾಕ್‌ಡೌನ್‌ನಿಂದ ದೇಶದಾದ್ಯಂತ ವಿಮಾನ ಹಾರಾಟ ಸ್ಥಗಿತವಾಗಿತ್ತು. ಜೊತೆಗೆ, ನಗರದ ಐಟಿ ಕಂಪನಿಗಳು ತನ್ನ ಸಿಬ್ಬಂದಿಗೆ ವರ್ಕ್ ಫ್ರಮ್‌ ಹೋಮ್‌ ಪದ್ಧತಿ ಜಾರಿ ಮಾಡಿದ್ದರು. ಈ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ಸುಮಾರು 50 ಸಾವಿರ ಕ್ಯಾಬ್‌ಗಳು ತನ್ನ ಸೇವೆಯನ್ನು ಸ್ಥಗಿತಗೊಳಿಸಿವೆ. ಪರಿಣಾಮ ಪ್ರಸ್ತುತ ಕೇವಲ 25 ಸಾವಿರಕ್ಕೂ ಕಡಿಮೆ ಕ್ಯಾಬ್‌ಗಳು ನಗರದಲ್ಲಿವೆ ಎಂದು ತನ್ವೀರ್‌ ಪಾಷಾ ಹೇಳಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

01/12/2021 02:05 pm

Cinque Terre

256

Cinque Terre

0

ಸಂಬಂಧಿತ ಸುದ್ದಿ