ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಟೋ ದರ ಪರಿಷ್ಕರಣೆಗೆ ಅಸ್ತು; ನಾಳೆಯಿಂದ ಏರಿಕೆ, ಪ್ರಯಾಣಿಕ ಸುಸ್ತು

ಬೆಂಗಳೂರು: ನಾಳೆಯಿಂದಲೇ ಆಟೋರಿಕ್ಷಾ ಮೀಟರ್ ದರ ಏರಿಕೆ ಆಗಲಿದೆ. ಹೌದು. ಪ್ರತಿ ಮೀಟರ್ ಸಾಮಾನ್ಯ ದರ‌‌‌ 25 ರೂ. ನಿಂದ 30 ರೂ.ಗೆ ಏರಿಕೆ ಮಾಡಲಾಗಿದೆ. ನಾಳೆಯಿಂದ (ಡಿಸೆಂಬರ್ 1) ಪರಿಷ್ಕ್ರತ ದರ ಜಾರಿಗೆ ಬರಲಿದೆ‌ ಎಂದು ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದಾರೆ.‌

ಆಟೋ ಗ್ಯಾಸ್ ದರ ಏರಿಕೆ, ಬಿಡಿಭಾಗ ಹಾಗೂ ವಿಮೆ ದರ ಹೆಚ್ಚಳ ಹಿನ್ನೆಲೆಯಲ್ಲಿ ಮೀಟರ್ ದರದಲ್ಲೂ ಹೆಚ್ಚಳ‌ ಮಾಡಬೇಕೆಂಬ ಆಗ್ರಹ ಆಟೋರಿಕ್ಷಾ ಸಂಘಟನೆಗಳಿಂದ ಕೇಳಿ ಬಂದಿತ್ತು.‌

ಇನ್ನು, ಕಳೆದ ಎಂಟು ವರ್ಷದಿಂದ ಆಟೋ ಮೀಟರ್ ದರ ಏರಿಕೆ ಮಾಡಿರಲಿಲ್ಲ. ಇದೇ ವೇಳೆ ತೈಲ ಬೆಲೆ, ಅಗತ್ಯ ವಸ್ತು ಬೆಲೆ ಹೆಚ್ಚಳದ ಜತೆಗೆ ಆಟೋ ದರವೂ ತುಟ್ಟಿ ಆಗಲಿದ್ದು, ಗ್ರಾಹಕರ ಅಸಮಾಧಾನಕ್ಕೂ ಕಾರಣವಾಗಿದೆ.

Edited By : Nagaraj Tulugeri
Kshetra Samachara

Kshetra Samachara

30/11/2021 12:13 pm

Cinque Terre

1.12 K

Cinque Terre

0

ಸಂಬಂಧಿತ ಸುದ್ದಿ