ಬೆಂಗಳೂರು: ಪೊಲೀಸ್ ಕೆಲಸದಲ್ಲಿ ಕಾರ್ಯನಿರ್ವಹಿಸುವಾಗ ಮರಣ ಒಂದಾ ಪೊಲೀಸ್ ಪೇದೆಯ ಕುಟುಂಬಕ್ಕೆ ಆಸರೆಯಾಗಿ ನಿಂತ ಪೊಲೀಸ್ ಸಿಬ್ಬಂದಿಗಳು. ಮಾಗಡಿ ರಸ್ತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಮಹೇಂದ್ರ ಅಕಾಲಿಕವಾಗಿ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದರು.
ಪೊಲೀಸ್ ಪೇದೆ ಮಹೇಂದ್ರ ಕುಟುಂಬಕ್ಕೆ 1997 ಬ್ಯಾಚ್ನ ಪೊಲೀಸರು ಒಟ್ಟುಗೂಡಿ 320000 ರೂಪಾಯಿ ಹಣವನ್ನು ಪೇದೆಯ ಕುಟುಂಬಕ್ಕೆ ಇಂದು ಹಸ್ತಾಂತರಿಸಿದರು. ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ ಸಿಬ್ಬಂದಿಗಳು ಒಟ್ಟುಗೂಡಿ ಮರಣ ಹೊಂದ ಪೊಲೀಸ್ ಗೆಳೆಯನಿಗೆ ಇಂದು ಶ್ರದ್ದಾಂಜಲಿ ಸಲ್ಲಿಸಿ ಕುಟುಂಬಕ್ಕೆ ಧೈರ್ಯ ತುಂಬಿದರು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
21/08/2022 08:51 pm