ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಅಪ್ಪ-ಅಮ್ಮನ ಕಳೆದುಕೊಂಡ ತಬ್ಬಲಿ ಮಕ್ಕಳ ಪಾಲಿಗೆ ದೇವರಾದ್ರು ಈ ಪೊಲೀಸ್ರುʼ

ಬೆಂಗಳೂರು: ಕಳೆದ ವಾರ ಮಹಾನಗರದಲ್ಲಿ ನಡೆದ ದಾರುಣ ಅಪಘಾತ ದುರ್ಘಟನೆಯಲ್ಲಿ ಬೆಂಗಳೂರು ಪೊಲೀಸ್ರು ಮೆರೆದ ಮಾನವೀಯತೆ ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ. ಹೌದು... ತಂದೆ-ತಾಯಿಯನ್ನು ‌ಕಳೆದುಕೊಂಡು ಅನಾಥರಾಗಿದ್ದ ಹೆಣ್ಣು ಮಕ್ಕಳ ಬೆನ್ನಿಗೆ ಪೊಲೀಸ್ರು ನಿಂತಿದ್ದರು. ಆಸ್ಪತ್ರೆ ಬಿಲ್ 5 ಲಕ್ಷ ದಾಟಿದ್ದು, ಕಂಡು ಕಂಗಾಲಾಗಿದ್ದ ಅಪ್ರಾಪ್ತ ಬಾಲೆಯರ ನೆರವಿಗೆ ಟ್ರಾಫಿಕ್ ಡಿಸಿಪಿ ಕುಲದೀಪ್ ಜೈನ್, ಇನ್ಸ್ ಪೆಕ್ಟರ್ ಲೋಹಿತ್ ಹಾಗೂ ಸಂಚಾರ ಇನ್‌ ಸ್ಪೆಕ್ಟರ್ ರೂಪ ಹಡಗಲಿ ಧಾವಿಸಿದ್ರು.

ಸದಾ ಕೇಸು-ಫೈನ್ ಅಂತ ಕೆಲಸ‌ ಮಾಡೋ ಸಂಚಾರ ಪೊಲೀಸ್ರು, ಮಕ್ಕಳ ಕಣ್ಣೀರು ಕಂಡು ಖುದ್ದು ಆಸ್ಪತ್ರೆಗೆ ಧಾವಿಸಿ ಸಂಪೂರ್ಣ ಬಿಲ್‌ ಪಾವತಿಸಿದ್ದಾರೆ. ತನ್ನ ವ್ಯಾಪ್ತಿಗೆ ಬಾರದಿದ್ರೂ ಬಾಲಕಿಯರ ಕಣ್ಣೀರು ಕಂಡು ಅನ್ನಪೂರ್ಣೇಶ್ವರಿ ನಗರ ಇನ್‌ ಸ್ಪೆಕ್ಟರ್ ಲೋಹಿತ್ ಆಸ್ಪತ್ರೆಗೆ ಧಾವಿಸಿ ಬಿಲ್ ಜೀರೋ ಮಾಡಿದ್ದಾರೆ.

ಇನ್ನು, ತಾಯಿ ಹೃದಯದ ಬ್ಯಾಟರಾಯನಪುರ ಸಂಚಾರ ಇನ್‌ ಸ್ಪೆಕ್ಟರ್ ರೂಪ ಹಡಗಲಿ, ನತದೃಷ್ಟ ದಂಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಅಷ್ಟು ದಿನವೂ ಆಸ್ಪತ್ರೆಗೆ ಭೇಟಿ ‌ನೀಡಿ ಆರೋಗ್ಯ ವಿಚಾರಿಸಿದ್ದರು.

ಕಳೆದ ವಾರ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯೋಗೇಂದ್ರ- ವಿಜಯ ಕಲಾ ದಂಪತಿ ಟಿಪ್ಪರ್ ಲಾರಿ ಡಿಕ್ಕಿ ಅಪಘಾತಕ್ಕೀಡಾಗಿದ್ರು. ದಂಪತಿಯನ್ನು ನಾಗರಬಾವಿಯ ಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಮೊದಲು ವಿಜಯಕಲಾ ಮೃತ ಪಟ್ರೆ ನಂತರ ಯೋಗೇಂದ್ರ ಮೃತ ಪಟ್ಟಿದ್ರು.

ಒಂದು ಕಡೆ ಪೋಷಕರನ್ನು ಕಳೆದುಕೊಂಡು ತಬ್ಬಲಿಯಾಗಿದ್ದ ಇಬ್ಬರು ಮಕ್ಕಳು, ಇನ್ನೊಂದು ಕಡೆ ಸಂಬಂಧಿಕರೂ ಹಣವಿಲ್ಲದೆ ಪರದಾಡುತ್ತಿದ್ರು. ಆದರೆ, ಹೃದಯ ಶ್ರೀಮಂತಿಕೆಯ ಇನ್‌ ಸ್ಪೆಕ್ಟರ್ ಗಳು 5 ಲಕ್ಷ 72 ಸಾವಿರ ಆಸ್ಪತ್ರೆ ಬಿಲ್ ನ್ನು ವೇ ಅಪ್ ಮಾಡಿಸಿದ್ದಾರೆ.

Edited By : Shivu K
PublicNext

PublicNext

15/07/2022 11:51 am

Cinque Terre

32.97 K

Cinque Terre

55

ಸಂಬಂಧಿತ ಸುದ್ದಿ