ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಗೋಣೂರಿನ ರೈತ ರಮೇಶ್- ಪ್ರೇಮ ದಂಪತಿ ಪುತ್ರ ಮನು @ ಮುನೇಗೌಡ ಕುಸ್ತಿಲಿ ದೇಶ ಮೆಚ್ಚೋ ಸಾಧನೆ ಮಾಡಿದ್ದಾನೆ. ಹೌದು! ಇಂಡೋ- ನೇಪಾಳ್ ಯೂತ್ ಗೇಮ್ಸ್- 2022ರ ಕುಸ್ತಿಯ 82 ಕೆ.ಜಿ. ಸೀನಿಯರ್ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದಿದ್ದಾನೆ.
ಜೂ. 15ರಂದು ನಡೆದ ಫೈನಲ್ ನಲ್ಲಿ ನೇಪಾಳದ ಕುಸ್ತಿಪಟುನ ಸೋಲಿಸಿ ಸ್ವರ್ಣ ಜಯಿಸಿದ್ದಾನೆ. ಬಾಲ್ಯದಿಂದ ತಂದೆ ರಮೇಶರೇ ಮಗನ ವಿದ್ಯೆ ಹಾಗೂ ಕ್ರೀಡೆಗೆ ಗುರುವಾಗಿ ಮುನ್ನಡೆಸಿದ್ದು, ಈಗ ಮಗನ ಚಿನ್ನ ಸಾಧನೆಗೆ ಫುಲ್ ಖುಷ್ ಆಗಿದ್ದಾರೆ.
ರಮೇಶ್ ದಂಪತಿ ಕೃಷಿ ಮಾಡಿಕೊಂಡೇ ಇಬ್ಬರು ಮಕ್ಕಳನ್ನು ಓದಿಸಿ, ಒಳ್ಳೆಯ ಕ್ರೀಡಾಪಟುಗಳನ್ನಾಗಿ ರೂಪಿಸಿದ್ದಾರೆ. ಮನು ಕುಸ್ತಿಪಟು, ಮನು ತಂಗಿ ಸಹ ಉತ್ತಮ ಅಥ್ಲೀಟ್. ಡಿಗ್ರಿ ಮುಗಿಸಿರೋ ಮನು ಖಾಸಗಿ ಕಂಪನಿಲಿ H.R.ಆಗಿ ಕೆಲಸ ಮಾಡ್ತಿದ್ದಾನೆ. ಹೈಸ್ಕೂಲ್ ನಿಂದಲೇ ಕರಾಟೆ- ಕುಸ್ತಿಲಿ ಆಸಕ್ತನಾಗಿದ್ದ. ಜಿಲ್ಲಾ ಮಟ್ಟದ ಕುಸ್ತಿ, ಯುನಿವರ್ಸಿಟಿ ಕುಸ್ತಿಲಿ ಪದಕ, ರಾಜ್ಯ- ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದು, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ದೇಶಕ್ಕೆ ಚಿನ್ನದ ಪದಕ ತಂದಿದ್ದಕ್ಕೆ ಗೋಣೂರು ಗ್ರಾಮಸ್ಥರು ಬಲು ಖುಷಿಗೊಂಡಿದ್ದಾರೆ.
ಕ್ರೀಡಾ ಶಕ್ತಿ- ಯುಕ್ತಿ ಇದ್ದರೂ ಸೂಕ್ತ ಸೌಲಭ್ಯ, ತರಬೇತಿ ಇಲ್ಲದೆ ನೂರಾರು, ಸಾವಿರಾರು ಗ್ರಾಮೀಣ ಪ್ರತಿಭೆಗಳು ಕಾಲೇಜು ಹಂತದಲ್ಲೇ ಕಮರಿ ಹೋಗ್ತವೆ. ಅಂತಹದ್ರಲ್ಲಿ ದೇವನಹಳ್ಳಿ ಪ್ರತಿಭೆ ಮನು ಎಲ್ಲಾ ಯುವಕರಿಗೆ ಮಾದರಿಯಾಗಿದ್ದಾನೆ.
PublicNext
20/06/2022 08:10 am