ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ವಿಶ್ವ ದಾದಿಯರ ದಿನಾಚರಣೆ'; ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಗೌರವಾರ್ಪಣೆ

ಯಲಹಂಕ: ಇಂದು ವಿಶ್ವ ದಾದಿಯರ ದಿನಾಚರಣೆ. ಈ ಪ್ರಯುಕ್ತ ಕೆಂಪೇಗೌಡ ವಾರ್ಡಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾದಿಯರನ್ನು ಸನ್ಮಾನಿಸಿ, ಅವರ ಸೇವಾ ಕೈಂಕರ್ಯವನ್ನು ಪ್ರಶಂಸಿಸಿ ಗೌರವಿಸಲಾಯಿತು.

ಈ ವೇಳೆ ಆಸ್ಪತ್ರೆ ಸಿಬ್ಬಂದಿ, ವೈದ್ಯರು ಉಪಸ್ಥಿತರಿದ್ದರು. ಡಾ.ಚೇತನ, ಡಾ.ಗಣೇಶ್ ಮಾತನಾಡಿ, ಶುಭ ಹಾರೈಸಿದರು.

ಬಿಜೆಪಿ ಪಕ್ಷದ ವೈದ್ಯಕೀಯ ‌ಪ್ರಕೋಷ್ಠ ಈ ಸನ್ಮಾನ‌ ಕಾರ್ಯಕ್ರಮವನ್ನು ಯಲಹಂಕದ ಸರ್ಕಾರಿ‌ ಆಸ್ಪತ್ರೆಯಲ್ಲಿ ಆಯೋಜಿಸಿತ್ತು.

ಯಲಹಂಕ ನಗರ ಮಂಡಲ ಅಧ್ಯಕ್ಷ ಸತೀಶ್, ಸಂಚಾಲಕರಾದ ಲತಾ, ವೈದ್ಯಕೀಯ ಪ್ರಕೋಷ್ಠದ ಬಸವರಾಜ ಜಗದಾಳೆ ಸೇರಿದಂತೆ ವೈದ್ಯಕೀಯ ಪ್ರಕೋಷ್ಠದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

13/05/2022 12:44 pm

Cinque Terre

2.16 K

Cinque Terre

0

ಸಂಬಂಧಿತ ಸುದ್ದಿ