ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಸಿಲ ಬೇಗೆಯಿಂದ ಬೆಂದವರಿಗೆ ತಂಪನ್ನೆರೆಯೋ ಆಶ್ರಮದ ಮಕ್ಕಳು !

ಕೆಂಗೇರಿ: ಬಿಸಿಲಿನ ಬೇಗೆಯಲ್ಲಿ ದಣಿದು ಬಂದವ್ರಿಗೆ, ಇಲ್ಲೊಂದು‌‌ ಕಡೆ ಪ್ರತಿದಿನವೂ, ಮಜ್ಜಿಗೆ,ಪಾನಕ, ಎಳನೀರು, ನಿಂಬೆಹಣ್ಣುನ‌ ಜ್ಯೂಸ್ , ಈ ತರಹದ ತಂಪ್ಪು ಪಾನಿಯಗಳನ್ನ ಕೊಡ್ತಿದ್ದಾರೆ. ಬಸ್‌ಗಳನ್ನ ನಿಲ್ಲಿಸಿ, ಬೈಕ್ ಸವಾರರನ್ನ ನಿಲ್ಲಿಸಿ, ಪಾನಿಯಗಳನ್ನ ವಿತರಿಸುತ್ತಾ ಇದ್ದಾರೆ. ಹಾಗಾದ್ರೆ, ಇದು ಎಲ್ಲಿ ? ಯಾಕೆ ಫ್ರೀಯಾಗಿ ಕೊಡ್ತಿದ್ದಾರೆ ? ಇದರ ಉದ್ದೇಶ ಏನು ಅನ್ನೋದನ್ನ ಬನ್ನಿ,ನೋಡೋಣ.

ಉತ್ತರಳ್ಳಿ‌ ಮೇನ್ ರಸ್ತೆಯ ಸಾವನ್‌ ದರ್ಬಾರ್ ಆಶ್ರಮದ ಮಕ್ಕಳು, ವೃದ್ಧರು,ವಯಸ್ಕರು, ಅಲ್ಲಿ ಕೆಲಸ ಮಾಡುವವರು, ಸೇರಿ ಆಶ್ರಮದಲ್ಲಿ ಬೆಳೆಯುವ, ಪದಾರ್ಥಗಳನ್ನ ಬಳಸಿಕೊಂಡು, ಬಿಸಿಲಿನ ಬೇಗೆಯಲ್ಲಿ ಬಂದವ್ರಿಗೆ ಪಾನಿಯಗಳನ್ನ ತಯಾರಿಸಿ ಉಚಿತವಾಗಿಯೇ ಕೊಡುತ್ತಿದ್ದಾರೆ. ಹಾಗಂತ ಒಂದೆರಡು ದಿನ ಪಾನಿಯವನ್ನ ಕೊಟ್ಟು ಸುಮ್ಮನಾಗುತ್ತಿಲ್ಲ. ಪ್ರತಿ ವರ್ಷವೂ ಬೇಸಿಗೆ ಬಂತಂದ್ರೆ ಸಾಕು, 2 ತಿಂಗಳು ಪೂರ್ತಿ ಈ ಪಾನಿಯಳನ್ನ ಕೊಡುವ ಪುಣ್ಯದ ಕೆಲಸ ಮಾಡುತ್ತಾರೆ.

ಬಸ್,ಆಟೋ, ವಾಹನಗಳನ್ನ ನಿಲ್ಲಿಸಿ‌ ಸವಾರರು ಜ್ಯೂಸ್ ಕುಡಿಯುತ್ತಿರುವ ದೃಶ್ಯಗಳು ಒಂದು‌ ಕಡೆಯಾದ್ರೆ,ಹೋಗುವ ವಾಹನಗಳ ನಿಲ್ಲಿಸಿ, ಗ್ಲಾಸ್ ಗಳಲ್ಲಿ, ಜ್ಯೂಸ್ ಹಿಡಿದು ಸಂತೋಷದಿಂದ ಮಕ್ಕಳು ಕೊಡುತ್ತಿರುವ ದೃಶ್ಯಗಳು ಮತ್ತೊಂದು ಕಡೆ ಕಂಡು ಬರುತ್ತದೆ.

ಇದನ್ನೆಲ್ಲ ನೋಡಿದ್ರೆ, ನಮ್ಮಗೂ ಈ ರೀತಿಯ ಕೆಲಸ ಮಾಡುಬೇಕು ಅಂತಲೇ ಸ್ಪೂರ್ತಿ ಆಗುತ್ತದೆ. ಮನೆಯಲ್ಲಿರೋ ಕಷ್ಟದ ಕಾರಣದಿಂದಲೇ ಮಕ್ಕಳನ್ನ ಆಶ್ರಮಕ್ಕೆ ಸೇರಿಸಿರುತ್ತಾರೆ. ಅಂತಹ ಮಕ್ಕಳು ಕೈ ಚಾಚೋದು ಬೇಡ, ದಾನ ಮಾಡಲಿ ಅಂತಲೇ ಅವರ ಕೈಯಲ್ಲಿ‌ ಇಂತಹ ಕೆಲಸ ಮಾಡಿಸುತ್ತಿರೋದು ಶ್ಲಾಘನೀಯ.ಇನ್ನು ಈ ಆಶ್ರಮದಲ್ಲಿ ಆಶ್ರಯ ಪಡೆದಿರುವ ಎಲ್ಲರಿಗೂ, ಆಶ್ರಯದಾತರಿಗೂ ಆ ದೇವರು ಇನ್ನಷ್ಟು ಕೆಲಸ ಮಾಡುವ ಶಕ್ತಿ ಕೊಡಲಿ ಅಂತಲೇ ಹಾರೈಸೋಣ.

ರಂಜಿತಸುನಿಲ್ ಮೆಟ್ರೋ ಬ್ಯೂರೊ ಪಬ್ಲಿಕ್ ನೆಕ್ಸ್ಟ್

Edited By : Manjunath H D
PublicNext

PublicNext

15/04/2022 08:06 pm

Cinque Terre

26.51 K

Cinque Terre

1

ಸಂಬಂಧಿತ ಸುದ್ದಿ