ಬೆಂಗಳೂರು: 19ನೇ ವರ್ಷದ ಚಿತ್ರ ಸಂತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ (ಭಾನುವಾರ) ಚಾಲನೆ ನೀಡಿದರು. ಈ ಬಾರಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಸ್ವಾತಂತ್ರ್ಯ ಯೋಧರಿಗೆ ಚಿತ್ರಸಂತೆ ಸಮರ್ಪಣೆ ಮಾಡುತಿದ್ದಾರೆ.
ಈ ಬಾರಿ ಜನರಿಗೆ ಚಿತ್ರಸಂತೆ ನೋಡುವ ಅವಕಾಶ ನೀಡಲಾಗಿತ್ತು. ವಿವಿಧ ದೇಶಗಳಿಂದ 1,500 ಕಲಾವಿದರು ಭಾಗಿಯಾಗಿದ್ದರು. ಚಿತ್ರ ಸಂತೆಯಲ್ಲಿ ಹಿನ್ನಲೆಯಲ್ಲಿ ಕುಮಾರ ಕೃಪ ರಸ್ತೆಯ ವಿನ್ಸರ್ ಮ್ಯಾನರ್ ವೃತ್ತದಿಂದ ರೇಸ್ ವ್ಯೂವ್ ಜಂಕ್ಷನ್ ರಸ್ತೆವರೆಗೂ ಎರಡೂ ಬದಿ ರಸ್ತೆಗಳನ್ನು ನಿನ್ನೆ (ಭಾನುವಾರ ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಬಂದ್) ಮಾಡಲಾಗಿತ್ತು.
PublicNext
28/03/2022 10:50 am