ದೇವನಹಳ್ಳಿ:- ರಷ್ಯಾ ಮತ್ತು ಯುಕ್ರೇನಿನ ಯುದ್ಧ ಭೂಮಿಯಿಂದ ತವರಿಗೆ ವಾಪಸ್ಸಾದ ಕರುನಾಡಿನ ಕಂದಮ್ಮಗಳಿಗೆ ಪೋಷಕರು ತಿರುಪತಿ ಲಡ್ಡು, ಮಂತ್ರಾಲಯದ ಸಿಹಿ ತಿನಿಸಿ, ಆನಂದಭಾಷ್ಪಗಳ ಮೂಲಕ ಸ್ವಾಗತ ಕೋರಿದರು. ಯುಕ್ರೇನ್ ನಿಂದ ತವರಿಗೆ ವಾಪಸ್ಸಾಗುತ್ತೇವೆ ಎಂಬ ವಿಶ್ವಾಸ ಇರಲಿಲ್ಲ. ಅಕ್ಕಪಕ್ಕದಲ್ಲೆ ಬಾಂಬ್, ಶೆಲ್ಗಳ ಸೌಂಡ್ ಕಿವಿಗೆ ಬಡಿಯುತ್ತಿತ್ತು. ನಾವು 3ಜನ ಝಫ್ರೋಜಝಿಯಾ ಯುನಿವರ್ಸಿಟಿಲಿ ಮಡಿಕಲ್ ಓದ್ತಾ ಇದ್ವಿ. ರಷ್ಯಾ ಯುದ್ಧ ಘೋಷಿಸಿದ್ದರಿಂದ ತಾಯ್ನಾಡಿಗೆ ಬರುವ ಭರವಸೆಗೆ ಕೇಂದ್ರ ಸರ್ಕಾರ & ಭಾರತ ರಾಯಭಾರ ಕಚೇರಿ ಬೆಂಬಲ ನೀಡಿದೆ ಅಂತಾರೆ ವಾಪಸ್ಸಾದ ಕನ್ನಡ ವಿದ್ಯಾರ್ಥಿನಿಯರು.
ಇನ್ನು ಮಕ್ಕಳು ಪ್ರಾಣಭಯದಲ್ಲಿ ತುಂಬಾನೆ ಭಯಗೊಂಡಿದ್ದರು. ಆದರೂ ಸಣ್ಣ ಆಸೆ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಪರೇಷನ್ ಗಂಗಾದ ಸಲುವಾಗಿ ಮಕ್ಕಳು ತವರಿಗೆ ಬಂದಿದ್ದಾರೆ. ಪ್ರಧಾನಿಗೆ, ಕರ್ನಾಟಕ ಸರ್ಕಾರಕ್ಕೆ ಪೋಷಕರು ಧನ್ಯವಾದ ಅರ್ಪಿಸಿದರು..
ಅಂತು ಪ್ರಾಣಭಯದಿಂದ ಝಫ್ರೋಜಿಯಾ ಯೂನಿವರ್ಸಿಟಿಯ ಯಲಹಂಕ ಮಾರುತಿನಗರದ ಸ್ವರ್ಣ, ಬೆಂಗಳೂರಿನ ರಚನಾ, ಚಿತ್ರದುರ್ಗದ ಸುನೇಹಾದೆಹಲಿಯಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಇಂದು ರಾತ್ರಿ 10ಗಂಟೆಗೆ 10ಜನ ವಿದ್ಯಾರ್ಥಿಗಳು ಆಗಮಿಸಿದರು. ಜೊತೆಗೆ ಇಂದು ಒಟ್ಟು 74 ಜನ ಆಗಮಿಸಿಪೋಷಕರೊಂದಿಗೆ ಖುಷಿ ಸಡಗರದಿಂದ ಮನೆಗಳತ್ತ ತೆರಳಿದರು.
ಸುರೇಶ್ ಬಾಬು Public Next ದೇವನಹಳ್ಳಿ..
Kshetra Samachara
08/03/2022 08:33 pm