ಬೆಂಗಳೂರು : ಲಿಂಗಾಯತ ಸಮುದಾಯಕ್ಕೆ ಸೇರಿದ ವೃದ್ದೆಯ ಶವ ಸಂಸ್ಕಾರವನ್ನು ದಲಿತ ಸ್ಮಶಾನದಲ್ಲಿ ಮಾಡುವುದರ ಮೂಲಕ ದಲಿತ ಯುವಕರು ಮಾನವೀಯತೆಯನ್ನು ಮೆರೆದಿದ್ದಾರೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದನ ಲೇಔಟ್ ನಲ್ಲಿ ಉತ್ತರ ಕರ್ನಾಟಕದ ವಿಜಯ ಕುಟುಂಬ ದವರು ಎಂಟು ವರ್ಷಗಳಿಂದ ವಾಸವಾಗಿದ್ದರು. ವಿಜಯ್ ಅವರ ತಾಯಿ ಎರಡು ದಿನಗಳ ಹಿಂದೆ ವಯೋ ಸಹಜವಾಗಿ ಸಾವನ್ನಪ್ಪಿದ್ದರು. ಆದ್ರೆ ಶವಸಂಸ್ಕಾರ ಮಾಡಲು ಉತ್ತರ ಕರ್ನಾಟಕಕ್ಕೆ ತೆಗೆದುಕೊಂಡು ಹೋಗಲಾಗದೆ, ಹಾಗೂ ಶವಸಂಸ್ಕಾರವನ್ನು ಎಲ್ಲಿ ಮಾಡುವುದಾಗಿ ಗೊತ್ತಾಗದೆ ಎರಡು ದಿನಗಳ ಕಾಲ ಮನೆಯಲ್ಲಿ ಇಟ್ಕೊಂಡಿದ್ರು,
ಇನ್ನು ಈ ವಿಚಾರವನ್ನು ವಿಜಯ ಇದೇ ಊರಿನ ಪ್ರವೀಣ್ ಎಂಬುವರಿಗೆ ಮಾಹಿತಿ ನೀಡಿದರು. ಬಳಿಕ ಪ್ರವೀಣ್ ಇಲ್ಲಿನ ಕಳ್ಳುಬಾಳು ಗ್ರಾಮದ ಸದಸ್ಯ ನರೇಂದ್ರಬಾಬು ಹಾಗೂ ದಲಿತ ಯುವಕರ ನೆರವಿನಿಂದ ದಲಿತರ ಸ್ಮಶಾನದಲ್ಲಿ ಶವಸಂಸ್ಕಾರ ನೆರವೇರಿಸಿದ್ದಾರೆ.
PublicNext
19/02/2022 07:43 pm