ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಬ್ಯಾಗ್ ಬಿಟ್ಟು ಹೋದ ಘಟನೆ ನಡೆದಿದೆ. ಇನ್ನು ಅನಾಮಧೇಯ ಬ್ಯಾಗ್ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಇನ್ನು ಈ ಬ್ಯಾಗ್ ಕಂಡ ಸಿಐಎಸ್ ಎಫ್ ಸಿಬ್ಬಂದಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಬಳಿಕ ಬ್ಯಾಗ್ ತಪಾಸಣೆ ನಡೆಸಲಾಗಿದೆ.
ಈ ವೇಳೆ ಸಿಐಎಸ್ ಎಫ್ ಪೊಲೀಸರಿಗೆ ಮತ್ತೊಂದು ಶಾಕ್ ಕಾದಿತ್ತು ಬ್ಯಾಗ್ ನಲ್ಲಿ ಯಾವುದೇ ಬಾಂಬ್ ಇರಲಿಲ್ಲ ಬದಲಿಗೆ ಒಂದು ಲಕ್ಷದ ನಲವತ್ತು ಸಾವಿರ ಕ್ಯಾಶ್ ಹಾಗೂ ನಾಲ್ಕು ಎಟಿಎಂ ಕಾರ್ಡ್ ಗಳು ಕಂಡು ಬ್ಯಾಗ್ ನಲ್ಲಿದ್ದ ವಿಸಿಟಿಂಗ್ ಕಾರ್ಡ್ ಗೆ ಕಾಲ್ ಮಾಡಿ ಬ್ಯಾಗ್ ನ ಮಾಲೀಕರಿಗೆ ಹಣ ಮತ್ತು ಬ್ಯಾಗ್ ಹಿಂದಿರುಗಿಸಲಾಗಿದೆ.
ನಡೆದದ್ದು ಇಷ್ಟೇ….
ವೇಣುಗೋಪಾಲ್ ಎಂಬ ವ್ಯಕ್ತಿ ಕೇರಳದ ತಿರುವನಂತಪುರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಶೌಚಾಲಯಕ್ಕೆ ಹೋಗಿ ವಾಪಸಾಗುವಾಗ ಬ್ಯಾಗ್ ಮರೆತು ಹೋಗಿದ್ದರು.
ಬಳಿಕ ವೇಣುಗೋಪಾಲ್ HAL ಉದ್ಯೋಗಿ ಎಂಬುದು ತಿಳಿದಿದೆ. CISF ಸಿಬ್ಬಂದಿ ವೇಣುಗೋಪಾಲ್ ಗೆ ಹಣ ಇದ್ದ ಬ್ಯಾಗ್ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸದ್ಯ ಸಿಬ್ಬಂದಿಯ ಪ್ರಾಮಾಣಿಕ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
Kshetra Samachara
14/02/2022 06:35 pm