ನೆಲಮಂಗಲ: ಕರ್ತವ್ಯದ ವೇಳೆ ಹೃದಯಾಘಾತದಿಂದ ಮೃತಪಟ್ಟ ಬಿಎಸ್ಎಫ್ ಯೋಧ ಶ್ರೀನಿವಾಸಮೂರ್ತಿ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಕಳೆದ 33 ವರ್ಷಗಳಿಂದ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ (BSF) ಸೇವೆ ಸಲ್ಲಿಸುತ್ತಿದ್ದ ಅವರು ಸದ್ಯ ಎಸ್.ಐ ಹುದ್ದೆಯಲ್ಲಿದ್ದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಬೆಂ.ಉತ್ತರ ತಾಲ್ಲೂಕು ದಾಸಪುರ ಹೋಬಳಿಯ ಗೋಪಾಲಪುರ ಮೂಲದ ಶ್ರೀನಿವಾಸಮೂರ್ತಿ ಅವರು ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬಾಲಬೂತ್ ಬಾರ್ಡರ್‌ನಲ್ಲಿ ನಿನ್ನೆ ರಾತ್ರಿ ಕರ್ತವ್ಯದಲ್ಲಿದ್ದಾಗ ಶ್ರೀನಿವಾಸಮೂರ್ತಿ ಹೃದಯಾಘಾತದಿಂದ ನಿಧನರಾದ ಹಿನ್ನೆಲೆ ಇಂದು ಶುಕ್ರವಾರ ಬೆಳಿಗ್ಗೆ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತರಲಾಗಿತ್ತು.ಇಂದು ಶುಕ್ರವಾರ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನೆರವೇರಿದೆ.
Kshetra Samachara
31/12/2021 07:26 pm