ಬೆಂಗಳೂರು : ನಮ್ಮ ಬೆಂಗಳೂರಿನಲ್ಲಿಗ ವಿದೇಶಿ ಕುರಿಗಳು. ಹೌದು ಬೆಂಗಳೂರಿನ ಬೊಮ್ಮನಹಳ್ಳಿಯ ನಿವಾಸಿಯಾಗಿರುವ ಇಮ್ರಾನ್ ಎಂಬುವವರು ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಿಂದ ಬೆಂಗಳೂರಿಗೆ 20 ಲೋಹಿ ಕುರಿಗಳನ್ನು ಖರೀದಿಸಿ ತಂದಿದ್ದಾರೆ.
ಏನಿದು ಲೋಹಿ ಕುರಿ?
ಲೋಹಿ ಪಾಕಿಸ್ತಾನದ ಅತ್ಯುತ್ತಮ ಕುರಿ ತಳಿಗಳಲ್ಲಿ ಒಂದಾಗಿದೆ. ಈ ತಳಿಯನ್ನು ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ನಮ್ಮ ಭಾರತದಲ್ಲಿಯೂ ಸಹ ಪಂಜಾಬ್ ಮತ್ತು ಹಿಮಾಲಯ ಪ್ರದೇಶದಲ್ಲಿ ಕಾಣಬಹುದು.
ಈ ಕುರಿಗಳನ್ನು ಈಗ ಇಮ್ರಾನ್ ನೋಡಿಕೊಳ್ಳುತ್ತಾರೆ ಮತ್ತು ಅವುಗಳನ್ನು ಪೋಷಿಸುತ್ತಾ ಇತರ ಅನೇಕ ಪ್ರಾಣಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೇ ಇಮ್ರಾನ್ ಸಾಹಿವಾಲ್ ಹಸು ಮತ್ತು ವಿವಿಧ ತಳಿಯ ಕೋಳಿ ಸೇರಿದಂತೆ ಇನ್ನು ಅನೇಕ ಪ್ರಾಣಿ,ಪಕ್ಷಿಗಳನ್ನ ಹೊಂದಿದ್ದಾರೆ.
ಸದ್ಯ ಇಮ್ರಾನ್ ತಮ್ಮ ಬೊಮ್ಮನಹಳ್ಳಿಯ ಮನೆಯ ಶೆಡ್ ನಲ್ಲಿ ಎಲ್ಲಾ ಪ್ರಾಣಿಗಳನ್ನು ಸಾಕಿದ್ದಾರೆ.
ಒಟ್ಟಾರೆಯಲ್ಲಿ ಇಮ್ರಾನ್ ಅವರಿಗೆ ವಿವಿಧ ಪ್ರಾಣಿ,ಪಕ್ಷಿಗಳನ್ನ ಸಾಕುವ ಹವ್ಯಾಸವಿದ್ದು ಅವರ ಮೃಗಾಲಯದಲ್ಲಿ ನೀವು ವಿವಿಧ ಕೋಳಿಗಳನ್ನು ಸಹ ನೋಡಬಹುದು.
ಇಮ್ರಾನ್ ಗೆ ಬಾಲ್ಯದಿಂದಲೂ ಪ್ರಾಣಿಗಳ ಮೇಲೆ ಪ್ರೀತಿ ಇರುವುದರಿಂದ ವಿಶೇಷ ತಳಿಯ ಕುರಿಗಳನ್ನು ತಂದು ಸಾಕಿದ್ದಾರೆ.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
25/03/2022 08:55 am