ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಖಾಸಗಿ ಕಂಪನಿಯಲ್ಲಿ ಯುವತಿಗೆ ಕಿರುಕುಳ; ಕೆಲಸಕ್ಕೆ ಸೇರಿಸಿಕೊಳ್ಳಲು ಕಂಪನಿ ಹೈಡ್ರಾಮಾ

ಆನೇಕಲ್: ಆನೇಕಲ್ ತಾಲೂಕಿನ ಮರಸೂರು ಗೇಟ್ ಸಮೀಪವಿರುವ ಮೈಕ್ರೋ ಪ್ಲಾಸ್ಟಿಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಆಡಳಿತ ಮಂಡಳಿಯ ಶಿವಕುಮಾರ್ ಎಂಬಾತ ಕೆಲಸದ ಜಾಗದಲ್ಲಿ ಕಿರುಕುಳ ಕೊಡುತ್ತಿದ್ದಾರೆ ಅಂತ ಮಾಧ್ಯಮಗಳ ಮುಂದೆ ಯುವತಿಯೊಬ್ಬಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹೀಗೆ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ಯುವತಿ ಹೆಸರು ಶಿವರತ್ನಮ್ಮ. ಮರಸೂರು ಗೇಟ್‌ನಲ್ಲಿರುವ ಮೈಕ್ರೋ ಪ್ಲಾಸ್ಟಿಕ ಪ್ರೈವೇಟ್ ಕಂಪನಿಯಲ್ಲಿ ಸುಮಾರ 10 ವರ್ಷಗಳಿಂದ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಿರಂತೆ. ಆದ್ರೆ ಇತ್ತೀಚಿಗೆ ಕೆಲ ತಿಂಗಳ ಹಿಂದೆ ಕೆಲಸ ಮಾಡುವಾಗ ಕಂಪನಿಯಲ್ಲಿ ಮಿಷನ್‌ಗೆ ಕೈಸಿಲಕಿ ಕೈ ಕಟ್ಟಾಗಿತ್ತಂತೆ. ಕಂಪನಿಯ ಕಡೆಯಿಂದ ಚಿಕಿತ್ಸೆ ನೀಡಿ ಒಂದು ತಿಂಗಳ ಕಾಲ ರಜೆಯನ್ನು ನೀಡಲಾಗಿತ್ತಂತೆ. ಈಗ ರಜೆ ಮುಗಿಸಿ ಕೆಲಸಕ್ಕೆ ಅಂತ ಹೋದರೆ ಕೆಲಸಕ್ಕೆ ಸೇರಿಸಿಕೊಳ್ಳದೆ ತೊಂದರೆ ಕೊಡುತ್ತಿದ್ದಾರೆ ಅಂತ ಅನೇಕಲ್ ಲೇಬರ್ ಇನ್ಸ್‌ಪೆಕ್ಟರ್ ನಾಗರತ್ನಾ ಅವರಿಗೆ ಶಿವರತ್ನಮ್ಮ ದೂರು ಸಲ್ಲಿಕೆ ಮಾಡಿದ್ದಾರೆ.

Edited By : PublicNext Desk
PublicNext

PublicNext

13/10/2022 08:28 pm

Cinque Terre

14.41 K

Cinque Terre

0

ಸಂಬಂಧಿತ ಸುದ್ದಿ