ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರಿ ಜಾಗವನ್ನು ವಶಪಡಿಸಿಕೊಳ್ಳುವಂತೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ

ಆನೇಕಲ್ : ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ವಿಂಗಡಿಸಿ ಕೋಟ್ಯಾಂತರ ರೂ ಗಳಿಗೆ ಮಾರಾಟ ಮಾಡಿರುವ ಡೆವಲಪರ್ಸ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಇಂದು ತಾಲೂಕು ಕಚೇರಿ ಎದುರು ಪ್ರಜಾ ವಿಮೋಚನಾ ಚಳುವಳಿ ಪ್ರತಿಭಟನೆಯನ್ನು ನಡೆಸಿದರು.

ಇನ್ನು ತಾಲೂಕು ದಂಡಾಧಿಕಾರಿಗಳ ದಿನೇಶ್ರವರಿಗೆ ಪತ್ರವನ್ನು ಸಲ್ಲಿಕೆ ಮಾಡಿದರು.ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿ ಚೊಕ್ಕಸಂದ್ರ ಗ್ರಾಮದಲ್ಲಿ ಸರ್ವೆ ನಂಬರ್ 25ರಲ್ಲಿ ಸರ್ಕಾರಿ ಸ್ವಾಮ್ಯದ ಜಾಗದಲ್ಲಿ ನಿವೇಶನಗಳನ್ನು ಕಟ್ಟಿ ಡೆವಲಪರ್ಸ್ ಕೋಟ್ಯಂತರ ರೂ ಗಳಿಗೆ ಮಾರಾಟ ಮಾಡಿದ್ದಾರೆ ಈ ಬಗ್ಗೆ 2012ರಲ್ಲಿ ಸರ್ವೆ ಮಾಡಿ ಸ್ಕೆಚ್ ಮಾಡಲಾಗಿತ್ತು.ಆ ಜಾಗವನ್ನು ಅಕ್ರಮವಾಗಿ ಡೆವಲಪರ್ಸ್ ಗಳು ಮಾರಾಟ ಮಾಡುತ್ತಿದ್ದಾರೆ. ಇಷ್ಟೆಲ್ಲ ಮಾರಾಟ ಮಾಡುತ್ತಿದ್ದರೂ ಸಹ ಸ್ಥಳೀಯ ಕಂದಾಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ ಇನ್ನು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಿ ಸರ್ಕಾರ ವಶಕ್ಕೆ ಪಡೆಯಬೇಕೆಂದು ಆಗ್ರಹ ಮಾಡಿದ್ದರು.

ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ಪ್ರಜಾ ವಿಮೋಚನೆ ಚಳುವಳಿಯ ಸಂಘಟನೆ ಕಾರ್ಯಕರ್ತರು ಮುಖಂಡರು ಭಾಗಿಯಾಗಿದ್ದರು .

Edited By : PublicNext Desk
Kshetra Samachara

Kshetra Samachara

25/08/2022 09:05 pm

Cinque Terre

2.8 K

Cinque Terre

0

ಸಂಬಂಧಿತ ಸುದ್ದಿ