ಕೋನಸಂದ್ರ:ನಗರದ ಕೆಂಗೇರಿ ಕೋನಸಂದ್ರದ ಕೆರೆಯಲ್ಲಿ ಇವತ್ತು ಯುವಕನ್ನೊಬ್ಬನ ಬಾಡಿ ಪತ್ತೆಯಾಗಿದೆ. ಜುನೈದ್ ( 17 ) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಜುನೈದ್ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ, ಆಗ ಫಿಟ್ಸ್ ಬಂದಿದೆ. ನಂತರ ಅದೇ ಕೆರೆಯಲ್ಲಿ ಬಿದ್ದು ಮುಳುಗಿ ಸತ್ತಿದ್ದಾನೆ.
ಜುನೈದ್ 5 ವರ್ಷದ ಮಗುವಿದ್ದಾಗಿನಿಂದಲೂ ಫಿಟ್ಸ್ ಬರ್ತಿತ್ತು. ಈ ಕಾರಣಕ್ಕೇನೆ ಈತ ಎಲ್ಲಿಗೂ ಹೋಗ್ತಾ ಇರ್ಲಿಲ್ಲ.
ಮಗ ಇಲ್ಲೆ ಎಲ್ಲೊ ಹೋಗಿದ್ದಾನೆ ಅಂತ ಸುಮ್ನಿದ್ದರು. ಆದರೆ, ಸಂಜೆ ಹೊತ್ತಿಗೆ ಎಲ್ಲಾ ಕಡೆ ಹುಡುಕಿದ್ದಾರೆ. ಸಂಬಂಧಿಕರ ಮನೆಯಲೂ ಕೇಳಿದ್ದಾರೆ. ಆದ್ರೆ ಬೆಳಗಾಗುವಷ್ಟರಲ್ಲಿ ಮಗನ ಶವ ಕೆರೆಯಲ್ಲಿ ತೇಲುತಿದೆ ಅಂದಾಗ್ಲೆ ಗೊತ್ತಾಗಿದ್ದು, ನನ್ ಮಗ ಸತ್ತ ಅಂತ ಎಂದು ಪೋಷಕರು ಕಣ್ಣೀರಿಟಿದ್ದಾರೆ.
ಯಾವಾಗ್ಲು ಮೀನು ಹಿಡಿಯಲು ಹೋಗ್ತಿದ್ದ ಜುನೈದ್ ಈ ಬಾರಿಯೂ ಹಾಗೆ ಸಹಜವಾಗಿ ಮೀನು ಹಿಡಿಯಲು ಹೋಗಿರ್ತಾನೆ. ಆದ್ರೆ ಅಲ್ಲೆ ಕಾದು ಕುಳಿತಿದ್ದ ಯಮರಾಯ ಅವನನ್ನ ಬಲಿ ತೆಗೆದುಕೊಂಡಿದ್ದಾನೆ.
Kshetra Samachara
13/05/2022 10:17 pm