ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಮಕ್ಕಳಲ್ಲಿ ಹೆಚ್ಚಾಗುತ್ತದೆ ಬಾಯಿ ಹುಣ್ಣು!

ಬೆಂಗಳೂರು: ವಾತಾವರಣದಲ್ಲಿನ ಬದಲಾವಣೆ ಹಾಗೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ 10 ದಿನಗಳಿಂದ ಎಲ್ಲೆಡೆ ಕೆಮ್ಮು, ನೆಗಡಿ, ಶೀತದ ಜತೆಗೆ ಮಕ್ಕಳಲ್ಲಿ ಕೈ, ಕಾಲು ಮತ್ತು ಬಾಯಿ ಹುಣ್ಣುಗಳು ಕಾಣಿಸಿಕೊಳ್ಳುತ್ತಿದ್ದು, ಶಾಲೆಗಳಲ್ಲಿ ಒಬ್ಬರಿಂದ ಒಬ್ಬರಿಗೆ ತೀವ್ರವಾಗಿ ಹರಡುತ್ತಿರುವುದು ಕಂಡು ಬಂದಿದೆ.

ಕೊರೊನಾದಿಂದಾಗಿ ಎರಡು ವರ್ಷಗಳ ಕಾಲ ಮನೆಯಲ್ಲಿದ್ದ ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಆದರೀಗ ವಾತಾವರಣ ಬದಲಾವಣೆಯಿಂದಾಗಿ ಕೈ, ಬಾಯಿ ಮತ್ತು ಕಾಲು ಹುಣ್ಣಿನ ಕಾರಣಕ್ಕೆ ಬಹುತೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸಾಲುಗಟ್ಟಿರುವುದು ಸಾಮಾನ್ಯವಾಗಿದೆ.

ಕಾಕ್ಸಾಕಿ ವೈರಸ್‌ನಿಂದ ಮಕ್ಕಳಲ್ಲಿ ಕೈ, ಕಾಲು, ಬಾಯಿ ಹುಣ್ಣು ಕಾಣಿಸಿಕೊಂಡರೂ ಪರಿಣಾಮ ತೀವ್ರವಾಗಿರುವುದಿಲ್ಲ. ಹಾಗಾಗಿ ಇದಕ್ಕೆ ಈವರೆಗೂ ಯಾವುದೇ ಲಸಿಕೆ ಲಭ್ಯವಿಲ್ಲ. ಇದು 10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತಿದೆ ಎಂದು ಆರೋಗ್ಯಧಿಕಾರಿಗಳು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

07/08/2022 01:24 pm

Cinque Terre

2.77 K

Cinque Terre

0

ಸಂಬಂಧಿತ ಸುದ್ದಿ