ರಿಪೋರ್ಟ್- ರಂಜಿತಾಸುನಿಲ್..
ಬೆಂಗಳೂರು : ವರ್ಲ್ಡ್ ಪ್ಲಾಸ್ಟಿಕ್ ಸರ್ಜರಿ ಡೇ ಹಿನ್ನಲೆಯಲ್ಲಿಂದು ಸಾರ್ವಜನಿಕರಿಗೆ ಅರಿವು ಮೂಡಿಸಿ ಈ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲು ಬೆಂಗಳೂರಿನ ಕೆಂಗೇರಿ ಹತ್ತಿರದ ಬಿಜಿಎಸ್ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಸಂಬಂಧಿಸಿದಂತೆ ಕಾರ್ಯಕ್ರಮವೊಂದು ನಡೆಯಿತು.
ದೇಶ-ವಿದೇಶಗಳಲ್ಲಿ ಈ ದಿನವನ್ನ ಆಚರಣೆ ಮಾಡ್ತಾರೆ. ಹುಟ್ಟಿದ ಮಕ್ಕಳಿಗೂ ಸಹ ಪ್ಲಾಸ್ಟಿಕ್ ಸರ್ಜರಿ ಮಾಡಬಹುದು. ಕ್ಯಾನ್ಸರ್ ಪೇಷಂಟ್ ಗೂ ಸಹ ಸರ್ಜರಿ ಮಾಡಿ ಸಕ್ಸಸ್ ಆಗಿರೋ ಉದಾಹರಣೆಗಳಿವೆ.
ಮೊದಲು ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾದ್ರೆ ಆಪರೇಷನ್ ಆದ ಜಾಗ ಕೆಲಸ ಮಾಡಬೇಕು ನಂತರ ಶೇಪ್ ಕೊಡಬೇಕು. ಮನುಷ್ಯನಲ್ಲಿರುವ ಚರ್ಮದಿಂದಲ್ಲೆ ಈ ಕೆಲಸವನ್ನ ಮಾಡುತ್ತಾರೆ. ತೊಡೆಯಲ್ಲಿ ಬಹಳಷ್ಟು ಚರ್ಮ ಇರುವುದರಿಂದ ಅಲ್ಲಿಯ ಚರ್ಮ ತೆಗೆದು ಈ ಪ್ಲಾಸ್ಟಿಕ್ ಸರ್ಜರಿಗೆ ಬಳಸಲಾಗುತ್ತದೆ.
ಇನ್ನೂ ಪ್ಲಾಸ್ಟಿಕ್ ಸರ್ಜರಿ ಎಂದರೆ ಎಲ್ಲರು ತುಂಬಾ ಹಣ ಖರ್ಚಾಗುತ್ತೆ ಎಂದುಕೊಳ್ಳುತ್ತಾರೆ ಆದ್ರೆ ಒಂದೊಂದು ಸರ್ಜರಿಗೆ ಒಂದೊಂದು ರೇಟ್ ಇರುತ್ತದೆ. ದೇಹದ ಯಾವುದೇ ಭಾಗಕ್ಕೆ ಏಟು ಬಿದ್ದು, 6 ಗಂಟೆಯೊಳಗೆ ಈ ಪ್ಲಾಸ್ಟಿಕ್ ಸರ್ಜರಿ ಸಕ್ಸಸ್ ಆಗುತ್ತೆ.
ಗಾಯ ಆದ ತಕ್ಷಣ ದಯವಿಟ್ಟು ಬೇಗ ಆಸ್ಪತ್ರೆಗಳಿಗೆ ಹೋಗಿ ಮುಂಜಾಗ್ರತಾ ಕ್ರಮವಹಿಸಬೇಕು. ಇನ್ನೂ ಆಕ್ಸಿಡೆಂಟ್ ನಲ್ಲಿ ಮಾತು ಕಳೆದುಕೊಂಡ ಪ್ರೊಫೆಸರ್ ಒಬ್ಬರ ನಾಲಿಗೆ ಸರ್ಜರಿ ಕೂಡ ಮಾಡಲಾಗಿದ್ದು ಸದ್ಯ ಆ ಪ್ರೊಫೆಸರ್ ಅವರ ಅನುಭವ ಹೇಗಿದೆ ನೀವೇ ಕೇಳಿ.
ಒಟ್ಟಿನಲ್ಲಿ ಅವರ ಚರ್ಮದಿಂದಲೇ ದೇಹದ ಹಾಳಾದ ಜಾಗವನ್ನ ಮತ್ತೆ ಸರ್ಜರಿ ಮೂಲಕ ಸರಿಪಡಸುವುದು ಸಂತಸದ ವಿಷಯ. ಆದ್ರೆ ದೇಹದ ಸೌಂದರ್ಯಕ್ಕೋಸರ ಸರ್ಜರಿ ಮಾಡಿಕೊಳ್ಳುವುದು , ಮತ್ತೆ ನಟ-ನಟಿಯರ ಹಾಗೆ ಕಾಣಬೇಕೆಂದು ಹೆಚ್ಚಾಗಿ ಸರ್ಜರಿ ಮಾಡಿಸಿಕೊಳ್ಳುವವರು ಸ್ವಲ್ಪ ಎಚ್ಚೆತ್ತುಕೊಳ್ಳಿ ಇದ್ರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳೋದು ಗ್ಯಾರಂಟ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
14/07/2022 10:50 pm