ಬೆಂಗಳೂರು: ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರ,ಕಮಲನಗರದಲ್ಲಿರುವ ದಿ.ಮಹದೇವಪ್ಪ ಪ್ರತಿಷ್ಠಾನ ಮತ್ತು ಇಂದಿರಾ ಹೆಲ್ತ್ ಕೇರ್ ಸಹಯೋಗದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕಣ್ಣಿನಪೂರೆ ಶಸ್ತ್ರಚಿಕಿತ್ಯೆ ಮಾಡಿಸಲಾಗಿ ಇಂದು ಅವರಿಗೆ ಉಚಿತವಾಗಿ ಕನ್ನಡಕ ವಿತರಣೆ ಕಾರ್ಯಕ್ರಮ. ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು ಕನ್ನಡಕಗಳನ್ನು ವಿತರಣೆ ಮಾಡಿದರು. ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಪಾಲ್ಗೊಂಡಿದ್ದರು.
ವಯೋಸಹಜ ಆನಾರೋಗ್ಯ ಪೀಡಿತರಾದಗ ತಪಾಸಣೆ ಮಾಡಿಸಿಕೊಳ್ಳಲು ಆಸ್ಪತ್ರೆ ವೆಚ್ಚ ಮಾಡಲು ಆರ್ಥಿಕವಾಗಿ ಸಬಲರಾಗಿರುವುದಿಲ್ಲ ಅದ್ದರಿಂದ ಸಾಮಾನ್ಯ ಜನರಿಗೂ ಉತ್ತಮ ವೈದ್ಯಕೀಯ ಚಿಕಿತ್ಯೆ ಲಭಿಸಬೇಕು ಎಂದು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ರವರ ಸ್ಮರಣೆಯಲ್ಲಿ ಇಂದಿರಾ ಹೆಲ್ತ್ ಕೇರ್ ಕ್ಲಿನಿಕ್ ಆರಂಭಿಸಲಾಗಿದ್ದು ಇಲ್ಲಿ ಪ್ರತಿದಿನ ಸಕ್ಕರೆ ಖಾಯಿಲೆ,ಬಿ.ಪಿ.ಮತ್ತು ಇ.ಸಿ.ಜಿ.ಜನರಲ್ ಚಕ್ ಅಪ್ ಗಳನ್ನು ತಜ್ಞ ವೈದ್ಯರುಗಳಿಂದ ಉಚಿತವಾಗಿ ತಪಾಸಣೆ ಮಾಡಲಾಗುತ್ತಿದೆ.
Kshetra Samachara
30/05/2022 04:30 pm