ಬೆಂಗಳೂರು: ಅಂತರಾಷ್ಟ್ರೀಯ ರೆಡ್‌ಕ್ರಾಸ್ ದಿನದ ಪ್ರಯುಕ್ತ ಯಲಹಂಕದ ಕಣ್ವಮಠದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಸ್ವಯಂಪ್ರೇರಣೆಯಿಂದ ಹತ್ತಾರು ದಾನಿಗಳು ಆಗಮಿಸಿ ಶಿಬಿರದಲ್ಲಿ ಪಾಲ್ಗೊಂಡು, 54 ಯೂನಿಟ್ ರಕ್ತವನ್ನು ದಾನ ಮಾಡಿದ್ದಾರೆ.
ಮೊದಲ ಮಹಾಯುದ್ಧದ ನಂತರ ವಿಶ್ವದಲ್ಲಿ ರಕ್ತಕ್ಕೆ ತೀವ್ರ ಅಭಾವ ಉಂಟಾಗಿತ್ತು. ಯುದ್ಧ, ಬೆಂಕಿ ಅವಘಡ, ಪ್ರಕೃತಿ ವಿಕೋಪ, ಅಪಘಾತ ಸಂದರ್ಭಗಳಲ್ಲಿ ರಕ್ತದ ಅನಿವಾರ್ಯತೆಯನ್ನು ಅರಿತ ಯೂರೋಪಿನ ಹೆನ್ರಿಡೊನಾಂಟ್ ರಕ್ತದಾನಕ್ಕೆ ನಾಂದಿ ಹಾಡಿದ್ದರು. ರೆಡ್ ಕ್ರಾಸ್ ಸಂಸ್ಥೆ ಪ್ರಾರಂಭವಾದದ್ದೆ ಈ ರೀತಿಯ ಜನಸೇವೆಗಾಗಿ. ಆದ್ದರಿಂದ ಹೆನ್ರಿ ಡೊನಾಂಟ್ ಅವರನ್ನು ರೆಡ್‌ಕ್ರಾಸ್ ಪಿತಾಮಹ ಎಂದು ಕರೆಯುತ್ತಾರೆ. ಇಂತಹ ಹಿನ್ನಲೆಯ ಹೆನ್ರಿ ಡೋನಾಂಟ್‌ರವರ ಹುಟ್ಟಿದ ಹಬ್ಬದ ಪ್ರಯುಕ್ತ ಇಂದು ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಹಾಗೂ ಬೆಂಗಳೂರು ನಗರದಲ್ಲಿ ಸೇವೆ ಸಲ್ಲಿಸುತ್ತಿದೆ.
SureshBabu Public Next ..Yalahanka.
PublicNext
08/05/2022 08:16 pm