ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ರಾಮನಗರಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಳಾಂತರ ಸದ್ಯಕ್ಕಿಲ್ಲ!

ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜುಗಳ ಕ್ಯಾಂಪಸ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹೀಗಂತ ಕಳೆದ ಜನವರಿಯಲ್ಲಿ ಉಸ್ತುವಾರಿ ಸಚಿವ ಡಾ.ಅಶ್ವಥ್ ನಾರಾಯಣ್ ತಿಳಿಸಿದ್ದರು.

ಆದರೆ ಇದೀಗ ಮೇ ಆರಂಭ ವಾಗುತ್ತಿದ್ದು, ರಾಮನಗರಕ್ಕೆ ವಿವಿ ಸ್ಥಳಾಂತರ ಪ್ರಕ್ರಿಯೆ ಶುರುನೇ ಆಗಿಲ್ಲ. ಇನ್ನೂ ಕೂಡಾ ವಿವಿಗೆ ಭೂಮಿ ಪರಭಾರೆ ಆಗಿಲ್ಲ.ಜಾಗ ಸಿಕ್ಕ ತಕ್ಷಣ ನಮ್ಮ ಪ್ರಕ್ರಿಯೆ ಶುರು ಮಾಡುತ್ತೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ. ಎಂ.ಕೆ. ರಮೇಶ್ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ನಮಗೆ ಜಾಗ ಸಿಕ್ಕ ಬಳಿಕ ವಿವಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದರು.

Edited By : Shivu K
Kshetra Samachara

Kshetra Samachara

28/04/2022 06:21 pm

Cinque Terre

2.51 K

Cinque Terre

0

ಸಂಬಂಧಿತ ಸುದ್ದಿ