ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಂದು ವಿಶ್ವ ಹೆಡ್ ಇಂಜ್ಯುರಿ ಡೇ; ʼತಲೆ ಸುರಕ್ಷತೆ ಜಾಗೃತಿ ಜಾಥಾʼ

ಬೆಂಗಳೂರು: ವಿಶ್ವ ಹೆಡ್ ಇಂಜ್ಯುರಿ ಡೇ ಬಗ್ಗೆ ಸಾರ್ವಜನಿಕರಿಗೆ ತಲೆ ಸುರಕ್ಷತೆ ಜಾಗೃತಿ ಅರಿವು ಮೂಡಿಸಲು ಪ್ರಕ್ರಿಯ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಹಾಗೂ ಪೀಣ್ಯ ಸಂಚಾರಿ ಪೊಲೀಸರ ಸಂಯುಕ್ತಾಶ್ರಯದಲ್ಲಿ ತುಮಕೂರು ರಸ್ತೆ 8ನೇ ಮೈಲಿ ವೃತ್ತದಿಂದ ಜಾಲಹಳ್ಳಿ ಕ್ರಾಸ್ ವೃತ್ತ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.

ಬ್ಯಾನರ್, ಹೋಲ್ಡಿಂಗ್ಸ್ ಹಿಡಿದ ನೂರಾರು ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಪೀಣ್ಯ ಸಂಚಾರಿ ಪೊಲೀಸರೂ ಭಾಗವಹಿಸಿದರು. ಜಾಲಹಳ್ಳಿ ವೃತ್ತದಲ್ಲಿ 2 ನಿಮಿಷ ವರೆಗೆ ಮಾನವ ಸರಪಳಿ ನಿರ್ಮಿಸಿ ತಲೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಅಲ್ಲದೆ, ರಸ್ತೆ ಮಧ್ಯೆ ಹೆಲ್ಮೆಟ್ ಧರಿಸದೆ ಬಂದ ಸವಾರರನ್ನು ತಡೆದು ನೂತನ ಐಎಸ್ಐ ಮಾರ್ಕಿನ ಹೆಲ್ಮೆಟ್ ನೀಡಿ, ಇನ್ಮುಂದೆ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಬಾರದೆಂದು ಪೊಲೀಸರು ತಿಳಿ ಹೇಳಿದರು.

ಪ್ರತಿವರ್ಷ ಶೇ.5 ರಷ್ಟು ಜನರು ಅಪಘಾತಗಳಿಂದಾಗಿ ಮೆದುಳಿನ ಗಾಯಕ್ಕೆ ತುತ್ತಾಗುತ್ತಾರೆ ಎಂದು ವರದಿ ಹೇಳುತ್ತದೆ. ಅದಕ್ಕೆಂದೇ ಕಾರು ಚಲಾಯಿಸುವಾಗ ಸೀಟ್ ಬೆಲ್ಟ್, ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್‌ ಮರೆಯದೇ ಬಳಸಿ ಎಂಬುದು ಕಾಳಜಿಯ ನುಡಿ.

Edited By : Nagesh Gaonkar
PublicNext

PublicNext

19/03/2022 06:56 pm

Cinque Terre

45.89 K

Cinque Terre

0

ಸಂಬಂಧಿತ ಸುದ್ದಿ