ಯಲಹಂಕ: ಕಂದಾಯ ಇಲಾಖೆ ಹಾಗೂ ಯಲಹಂಕ ತಾಲ್ಲೂಕು ಆಡಳಿತ ವತಿಯಿಂದ ಅರ್ಹ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ವಿಶೇಷ ಚೇತನರು, ಕಡು ಬಡವರು ಮತ್ತು ವಯೋವೃದ್ಧರಿಗೆ ಪಿಂಚಣಿ ಪ್ರಮಾಣ ಪತ್ರ ವಿತರಿಸಲಾಯಿತು.
ಅರ್ಹ 100 ಜನರಿಗೆ ಯಲಹಂಕ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪಿಂಚಣಿ ಅದಾಲತ್ ನಲ್ಲಿ ಪ್ರಮಾಣ ಪತ್ರಗಳನ್ನು ಶಾಸಕರು ಮತ್ತು ತಹಶೀಲ್ದಾರ್ ವಿತರಿಸಿದರು. ಪ್ರಮಾಣ ಪತ್ರ ವಿತರಿಸಿದ ಬಿಡಿಎ ಅಧ್ಯಕ್ಷರೂ ಆದ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಸ್ಥಳೀಯವಾಗಿ ಇನ್ನೂ ಸೌಲಭ್ಯ ದೊರಕದ ಕಟ್ಟಕಡೆ ಜನರಿಗೂ ಸೌಕರ್ಯ ಸಿಗಬೇಕು. ನಮ್ಮ ಸರ್ಕಾರ ಪಿಂಚಣಿ ರೀತಿಯ ಎಲ್ಲಾ ಸೌಲಭ್ಯ ಒದಗಿಸಲಿದೆ ಎಂದರು. ತಹಶೀಲ್ದಾರ್ ನರಸಿಂಹಮೂರ್ತಿ, ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
29/01/2022 05:24 pm