ಬೆಂಗಳೂರು: ವೀಕೆಂಡ್ ಕರ್ಫ್ಯೂ ದಿಂದ ಎರಡು ದಿನ ಜನರನ್ನ ಜೈಲಿನಲ್ಲಿ ಇಟ್ಟಂತಾಗುತ್ತಿದೆ. ಎರಡು ದಿನ ಮನೆಯಲ್ಲಿಯೇ ಇದ್ದರೇ ಜೀವನ ನಡೆಯುವುದೇ ಹೇಗೆ..? ಹೀಗಂತ ಪ್ರಶ್ನೆ ಮಾಡಿರೋ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ರಾಜ್ಯ ಸರ್ಕಾರದ ವೀಕೆಂಡ್ ಕರ್ಫ್ಯೂವನ್ನ ತೀವ್ರವಾಗಿಯೇ ವಿರೋಧಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿ ವಾಟಾಳ್ ನಾಗಾರಾಜ್, ಮುಂದಿನವಾದಿಂದ ವೀಕೆಂಡ್ ಕರ್ಫ್ಯೂ ಬೇಡವೇ ಬೇಡ ಅಂತಲೇ ಒತ್ತಾಯಿಸಿದ್ದಾರೆ.
ಆರೋಗ್ಯ ಸಚಿವರು ದಿನಕೊಂದು ರೀತಿ ಮಾತನಾಡುತ್ತಿದ್ದಾರೆ. ಇವರ ನಡೆ ಹಿಟ್ಲರ್ ರೀತಿಯೇ ಇದೇ ಅಂತಲೂ ಆರೋಗ್ಯ ಸಚಿವ ಸುಧಾರಕ್ ಅವರನ್ನೂ ಟೀಕಿಸಿದ್ದಾರೆ ವಾಟಾಳ್ ನಾಗಾರಾಜ್.
PublicNext
16/01/2022 02:11 pm