ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೂರಾರು ಜನರ ಜೀವ ರಕ್ಷಕಿ ಬೆಂಗಳೂರಿನ ಈ ವೈದ್ಯೆ

ಅಂದು ಊರಿಗೆ ಊರೇ ಖಾಲಿಯಾಗಿತ್ತು. ರಸ್ತೆಗಳು ನಿಶ್ಯಬ್ದವಾಗಿತ್ತು. ಅಷ್ಟೇ ಯಾಕೇ ಇಡೀ ಜಗತ್ತೇ ನಿಶ್ಯಬ್ದವಾಗಿತ್ತು. ಎಲ್ಲಾರೂ ತಮ್ಮ ಮನೆಗಳಲ್ಲಿ ಇದ್ದು ತಮ್ಮ ಮನೆಯವರೊಂದಿಗೆ ಕಾಲ ಕಳೆಯುತ್ತಿದ್ದ ಸಂದರ್ಭವದು. ಆದ್ರೆ, ಇವರು ತಮ್ಮವರನ್ನೆಲ್ಲ ಮರೆತು ಮನೆಯಿಂದ ತಿಂಗಳುಗಟ್ಟಲೆ ದೂರವಾಗಿ ಜನರ ಸೇವೆಗಾಗಿ ನಿಂತಿದ್ದರು. ಭೂಮಿಯ ಮೇಲೆ ಕಾಣುವ ದೇವರು ಆಗಿದ್ದರು ಅವರೇ ವೈದ್ಯರು.

ಕೊರೊನಾ ಸಂಕಷ್ಟದ ಕಾಲದಲ್ಲಿ ವೈದ್ಯರು ತಮ್ಮ ಮನೆಗಳಿಂದ ದೂರವಾಗಿ ಜನರನ್ನು ಕಾಪಾಡಲು ಆಸ್ಪತ್ರೆಯಲ್ಲಿ ರಾತ್ರಿ-ಹಗಲು ಕಷ್ಟಪಡುತ್ತಿದ್ದರು. ಎಷ್ಟೋ ವೈದ್ಯರು ತಮ್ಮ ಜೀವಗಳನ್ನು ಕೂಡ ಬಲಿ ನೀಡಿ ಜನರ ಜೀವವನ್ನು ಉಳಿಸಿದ್ದಾರೆ. ಎಲ್ಲಾ ವೈದ್ಯರಂತೆ ಬೆಂಗಳೂರಿನ ಈ ವೈದ್ಯೆ ಕೂಡ ತಮ್ಮ ಮನೆಯವರಿಂದ ದೂರವಿದ್ದು ಜನರ ಜೀವಗಳನ್ನು ಉಳಿಸಿದ್ದಾರೆ. ಇವರ ಹೆಸರು ಡಾಕ್ಟರ್ ಸೈಯದ. ಕೊರೋನಾ ಸಂದರ್ಭದಲ್ಲಿ ಇವರು ಬಿಬಿಎಂಪಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಿ ಅದೆಷ್ಟೋ ಜೀವಗಳನ್ನು ಉಳಿಸಿದ್ದಾರೆ. ರಾತ್ರಿ-ಹಗಲೆನ್ನದೆ ರೋಗಿಗಳಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಇವರು.

ಇವರು ಬಿಬಿಎಂಪಿ ಆರೋಗ್ಯ ಇಲಾಖೆಯಲ್ಲಿ ಕೋವಿಡ್ ಡಾಕ್ಟರ್ ಆಗಿ ಕಾರ್ಯನಿರ್ವಹಿಸಿದ್ದು ಹಲವಾರು ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಇವರು ಮೂರು ಬಾರಿ ಕೊರೊನಾಗೆ ಪಾಸಿಟಿವ್ ಆಗಿ ಕೂಡ ತಮ್ಮ ಕಾರ್ಯ ನಿರ್ವಹಿಸಿದ್ದಾರೆ. ಮೊದಲನೆ ಅಲೆಯಲ್ಲಿ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲು ಗೊಂಡು ICU ಚಿಕಿತ್ಸೆ ಪಡೆದು ಮತ್ತೆ ಎದ್ದು ಬಂದು ಜನರಿಗೆ ಚಿಕಿತ್ಸೆ ನೀಡಲು ಬಂದಿದ್ದಾರೆ. ಹೀಗಾಗಿ, ಇವರ ಸೇವಾ ಮನೋಭಾವವನ್ನ ಗುರುತಿಸಿ ಸೈಯದ ಅವರಿಗೆ ಇಂದು ವಿಶೇಷವಾಗಿ ಸನ್ಮಾನಿಸಲಾಯಿತು. ಇವರಂತಹ ಅದೆಷ್ಟೋ ವೈದ್ಯರು ತಮ್ಮ ಜೀವಗಳನ್ನು ಪಣಕ್ಕಿಟ್ಟು ರೋಗಿಗಳ ಜೀವಗಳನ್ನು ಉಳಿಸಿದ್ದಾರೆ. ಎಲ್ಲಾ ವೈದ್ಯರಿಗೂ ನಮ್ಮದೊಂದು ಸಲಾಂ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

02/07/2022 05:35 pm

Cinque Terre

65.56 K

Cinque Terre

9

ಸಂಬಂಧಿತ ಸುದ್ದಿ