ನೆಲಮಂಗಲ: ಹೆಮ್ಮಾರಿ ಸೋಂಕು ಕೊರೊನಾ ಎಲ್ಲರನ್ನು ಬೆಂಬಿಡದೇ ಕಾಡುತ್ತಿದೆ. ಸದ್ಯ 75 ಮಂದಿ ವಸತಿ ಶಾಲಾ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾದ ಘಟನೆ ನೆಲಮಂಗಲ ತಾಲ್ಲೂಕಿನ ಬೈರನಾಯಕನಹಳ್ಳಿ ವಸತಿ ಶಾಲೆಯಿಂದ ವರದಿಯಾಗಿದೆ.
ಸದ್ಯ ವಸತಿ ಶಾಲೆಯಲ್ಲೇ ಸೋಂಕಿತ ವಿದ್ಯಾರ್ಥಿಗಳಿಗೆ ಐಸೊಲೇಶನ್ ಮಾಡಲಾಗಿದ್ದು, ಮಕ್ಕಳ ಆರೋಗ್ಯ ಮೇಲ್ವಿಚಾರಣೆಗೆ ಹಸಿರುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಗಳ ನೇಮಕ ಮಾಡಲಾಗಿದೆ ಎಂದು ನೆಲಮಂಗಲ ತಾಲ್ಲೂಕು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Kshetra Samachara
24/01/2022 06:06 pm